ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರಿಗೆ ಕೋವ್ಯಾಕ್ಸಿನ್ ಲಸಿಕೆ

????????????????????????????????????

ಸಿರುಗುಪ್ಪ ಮಾ 26 : ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮತ್ತು ಅವರ ಪತ್ನಿ ಶಾರದ ಸೋಮಲಿಂಗಪ್ಪ ಅವರು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡರು.
ನಂತರ ಮಾತನಾಡಿದ ಅವರು ಪ್ರಪಂಚದಲ್ಲಿ ಹಬ್ಬಿರುವ ಎರಡನೇ ಅಲೆ ಕರೋನಾ ವೈರಸ್‍ನ್ನು ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರುವು ಅನೇಕ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 45ವರ್ಷದ ಮೆಲ್ಪಟ್ಟ ನಾಗರಿಕರು ಯಾವುದೇ ಅನುಮಾನಸ್ಪದ ರೋಗಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ವೈಧ್ಯರನ್ನು ಭೇಟಿ ನೀಡಿ, ವೈಧ್ಯರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಮುಂಜಾಗೃತವಾಗಿ ರೋಗಗಳಿಂದ ದೂರಬೇಕು, ಕೋವಿಡ್ ನಿಯಂತ್ರಣಕ್ಕೆ ಹಾಕುವ ಕೋವ್ಯಾಕ್ಸಿನ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ನಮ್ಮ ತಾಲೂಕಿನಲ್ಲಿ ಹಿರಿಯರು ಸ್ವಯಂ ಪ್ರೇರಣೆಯಿಂದ ಕೋವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದೆ ಬರುತ್ತಿರುವುದು ಹರ್ಷದಾಯಕವಾಗಿದೆ, ಜಿಲ್ಲೆಯಲ್ಲಿ ಮುಂಜಾಗೃತವಾಗಿ ಅತಿ ಹೆಚ್ಚು ಲಸಿಕೆಯನ್ನು ಹಾಕುವುದರ ಜತೆಯಲ್ಲಿ ಕರೋನಾ ನಿಯಂತ್ರಣಕ್ಕೆ ಕಡಿವಾಣವು ಹಾಕಿರುವುದು ನಮ್ಮ ವೈಧ್ಯರ ಹೆಮ್ಮೆಯ ಸಂಗಾತಿಯಾಗಿದೆ, ಸರ್ಕಾರಿ ಆಸ್ಪತ್ರೆಯ ಸ್ವಚ್ಚತೆಯು ಉತ್ತಮವಾಗಿದ್ದು ಹೀಗೆ ಮುಂದುವರೆಸುವಂತೆ ತಿಳಿಸಿದರು.
ಇದೆ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಈರಣ್ಣ, ಆಡಳಿತ ಅಧಿಕಾರಿ ಡಾ.ದೇವರಾಜ ಹಾಗೂ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.