ಕೋಲಾರ, ಮೇ ೨೮- ಇವರು ಶಾಸಕರು ಅಲ್ಲಾ. ವಿಧಾನ ಪರಿಷತ್ ಸದಸ್ಯರು ಅಲ್ಲಾ..ಅದರೂ ಇವರಿಗೆ ಸ್ಥಾನ ಧಕ್ಕಿದೆ, ಇವರು ಯಾರಪ್ಪ ಅಂತಿರಾ ? ಇವರು ರಾಯಚೂರಿನ ಕಾಂಗ್ರೇಸ್ ಪಕ್ಷದ ನಿಷ್ಟಾವಂತ ಕಾಂಗ್ರೇಸ್ ಕಾರ್ಯಕರ್ತ ಎಂಬ ಕಾರಣಕ್ಕೆ ಎನ್.ಎಸ್. ಬೋಸ್‌ರಾಜು ಅವರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಕಾಂಗ್ರೇಸ್ ಪಕ್ಷ ನೂತನ ಸಂಪ್ರಾದಯಕ್ಕೆ ಮಣೆ ಹಾಕಿದೆ.
ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಮೊಗಲೂರು ಪಶ್ಚಿಮ ಗ್ರಾಮದವರಾUದೆ ಎನ್.ಎಸ್.ಬೋಸ್‌ರಾಜು ಅವರು ಕ್ಷತ್ರಿಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕೃಷಿ, ಹೈನುಗಾರಿಕೆ,ಕೋಳಿ ಸಾಕಾಣಿಕಯನ್ನು ಬೃಹತ್ ಪ್ರಮಾಣದ ಉದ್ಯಮವಾಗಿಸುವ ಮೂಲಕ ಎನ್.ಎಸ್. ಬೋಸ್‌ರಾಜು ಅವರು ರಾಜಕೀಯ ಪ್ರವೇಶಿಸಿದ್ದಾರೆ.
ಯುವಘಟಕದ ರಾಜಕಾರಣವನ್ನು ಪ್ರವೇಶುಸು ಹಂತ,ಹಂತವಾಗಿ ಬೆಳೆದು ಬಂದ ಅವರು ಮಾನ್ವಿ ಕ್ಷೇತ್ರದಿಂದ ಮೊದಲ ಬಾರಿಗೆ ಸೋಲನ್ನಾಪ್ಪಿದ್ದು ನಂತರ ಎರಡು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದರು, ಮಾನ್ವಿ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರವಾಗಿದ್ದರಿಂದ ರಾಯಚೂರು ನಗರ ಕ್ಷೇತ್ರದತ್ತ ಮುಖ ಮಾಡಿದ್ದರು, ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಎಂ.ಎಲ್.ಸಿ. ಸ್ಥಾನಕ್ಕೆ ಆಯ್ಕೆಯಾಗಿದ್ದರು, ಈ ಬಾರಿಯೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬ ಕಾರಣಕ್ಕೆ ಇವರಿಗೆ ಟಿಕೆಟ್ ಕೈ ತಪ್ಪಿತ್ತು,
ಈ ವಿಚಾರವಾಗಿ ರಾಹುಲ್ ಗಾಂಧಿಯವರೇ ಇವರೊಂದಿಗೆ ಚರ್ಚಿಸಿ ನಿಮಗೆ ಮುಂದಿನ ಸಚಿವ ಸಂಪುಟದಲ್ಲಿ ಸೂಕ್ತವಾದ ಸ್ಥಾನಮಾನ ನೀಡುವುದಾಗಿ ಆಶ್ವಾಸನೆ ನೀಡಿದ್ದರು ಹಾಗಾಗಿ ಅವರಿಗೆ ಕೊಟ್ಟ ಮಾತಿನಂತೆ ಸಚಿವ ಸ್ಥಾನವನ್ನು ನೀಡಲಾಗಿದೆ. ಮುಂದೆ ಇವರನ್ನು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡುವ ಮೂಲಕ ಸಚಿವ ಸ್ಥಾನವನ್ನು ಅಧಿಕೃತಗೊಳಿಸಲಾಗುವುದು ಎನ್ನಲಾಗಿದೆ.