ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿಕೆ ತಿರುಚಲಾಗಿದೆ : ಮೋದಿನ ಪಟೇಲ ಅಣಬಿ

ಕಲಬುರಗಿ :ಫೆ.29: ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರ ಬಗ್ಗೆ ಪತ್ರಿಕೆಯಲ್ಲಿ ಮತ್ತು ಮಾಧ್ಯಗಳಲ್ಲಿ ಅವರ ಹೇಳಿಕೆ ತಿರುಚಿ ವರದಿ ಮಾಡಿದ್ದಾರೆ ಇದನ್ನು ಜಿಲ್ಲಾ ಕಾಂಗ್ರೆಸ ಪ್ರಚಾರ ಸಮಿತಿ ಕಲಬುರಗಿ ಜಂಟಿ ಸಂಯೋಜಕರು ಮತ್ತು ಕಲಬುರಗಿ ದಕ್ಷಿಣ ಉಸ್ತುವಾರಿ ಮೋದಿನ ಪಟೇಲ ಅಣಬಿ ಅವರು ಖಂಡಿಸಿದ್ದಾರೆ.
ಮಾನ್ಯ ಶಾಸಕರು ಸುಮಾರು 50-60 ವರ್ಷಗಳಿಂದ ಸತತವಾಗಿ ಕಾಂಗ್ರೇಸ್ ಪಕ್ಷದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ ಗ್ರಾಮ ಪಂಚಾಯತದಿಂದ ಜಿಲ್ಲಾ ಪಂಚಾಯತವರೆಗೆ ಎಮ್.ಎಲ್.ಸಿ ಯಿಂದ ಎಮ್.ಎಲ್.ಎ ವರೆಗೆ ತಳಮಟದಿಂದ ಕೆಲಸ ಮಾಡುತ್ತಾ ಬಂದಿದ್ದಾರೆ ಕಾಂಗ್ರೇಸ್ ಪಕ್ಷದಲ್ಲಿ ಬ್ಲಾಕ ಅಧ್ಯಕ್ಷರಾಗಿ ಜಿಲ್ಲಾ ಅಧ್ಯಕ್ಷರಾಗಿ ರಾಜ್ಯ ವಕ್ತಾರರಾಗಿ ಹಲವಾರು ಜಿಲ್ಲೆಗಳ ಉಸ್ತುವಾರಿಯಾಗಿ ನಿಷ್ಟವಂತರಾಗಿ ಕೆಲಸ ಮಾಡಿದ್ದಾರೆ ಇವರ ಬಗ್ಗೆ ಈ ರೀತಿ ವರದಿ ಮಾಡುವುದು ಮತ್ತು ಮಾಧ್ಯಮಗಳಲ್ಲಿ ತೋರಿಸುವುದು ತಪ್ಪು ಇದ್ದೆಲ್ಲ ಎದುರಾಳಿ ಪಕ್ಷದವರ ಕೈವಾಡವಿದೆ.
ಸನ್ಮಾನ್ಯ ದಿ: ಶ್ರೀ ಧರ್ಮ ಸಿಂಗ್ ಮಾಜಿ ಮುಖ್ಯ ಮಂತ್ರಿಗಳು ಮತ್ತು ಡಾ| ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರು ಎ.ಐ.ಸಿ.ಸಿ ಇವರ ಗರಡಿಯಲ್ಲಿ ಪಳಗಿದವರು ಪಕ್ಷದ ಯಾವುದೇ ಜವಬ್ದಾರಿ ಕೊಟ್ಟರು ಸರಿಯಾಗಿ ನಿಭಾಯಿಸಿ ತನ್ನದೆಯಾದ ಚಾಪು ಕೂಡಿಸಿರುವ ನಾಯಕರು ಶಾಸಕಾರದ ಮೇಲೆ ದಕ್ಷಿಣ ಮತಕ್ಷೇತ್ರದಲ್ಲಿ ಎಲ್ಲಾ ವಾರ್ಡಗಳಲ್ಲಿ ತಿರುಗಾಡಿ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿರುವ ಜಲವಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಕೊಟ್ಟಿದ್ದಾರೆ ಮತ್ತು ಎಲ್ಲಾ ಕಾರ್ಯಕರ್ತರಿಗೆ ಸರಿ ಸಮಾನವಾಗಿ ನೋಡುವ ಮನೋಬಾವ ಇವರದು ಇಂತಹ ನಾಯಕರ ವಿರುದ್ಧ ಹೇಳಿಕೆ ತಿರುಚಿ ಬರೆದಿರುವುದನ್ನು ಖಂಡಿಸಿದ್ದಾರೆ.