ಶಾಸಕ ಅಬ್ಬಯ್ಯರ ಚೇತರಿಕೆಗೆ ಪೂಜೆ- ಪ್ರಾರ್ಥನೆ

ಹುಬ್ಬಳ್ಳಿ,ಜ15: ಕೋವಿಡ್-19 ಸೋಂಕಿಗೆ ತುತ್ತಾಗಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನೇಕಾರನಗರದ ಪ್ರಸಾದ ಅಬ್ಬಯ್ಯ ಅಭಿಮಾನಿಗಳ ಬಳಗದಿಂದ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಶಾಸಕರು ಶೀಘ್ರ ಗುಣಮುಖರಾಗಿ ಮತ್ತೆ ಅಭಿವೃದ್ಧಿ ಕಾರ್ಯಗಳತ್ತ ತೊಡಗಬೇಕು. ಅವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳಬೇಕು ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವಗಂಗಾ ಮಾನಶೆಟ್ಟರ್, ಮುಖಂಡರಾದ
ರಾಜಕುಮಾರ ಕಾಮರೆಡ್ಡಿ, ರಾಕೇಶ ಪಲ್ಲಾಟೆ, ಬಾಗಣ್ಣ ಬಿರಾಜಧಾರ, ಸುರೇಶ ಮಾನಶೆಟ್ಟರ್, ಗಿರೀಶ ಮಾನಶೆಟ್ಟರ್, ಜಗದೀಶ್ ಬಡಿಗೇರ್, ಶ್ವೇತಾ ಗಾಣಿಗೇರ, ವಸಂತಮ್ಮ ಪೂಜಾರ, ಶ್ರೀನಿವಾಸ ಕಾಂಬಳೆ, ಕಾಶೀನಾಥ ಪವಾರ, ರಾಜು ತಾವರೆ, ಸತೀಶ ಮಾನಶೆಟ್ಟರ್, ರಾಜು ಕಣಕಿ, ಶಿವು ಮಡಿವಾಳರ, ಮಂಜುನಾಥ ಕಾಟೀಗರ,ನವೀನ್ ಈಳಗೇರ್, ವಿನಾಯಕ ಬಂಗಿಗೌಡರ, ಇತರರು ಉಪಸ್ಥಿತರಿದ್ದರು.