ಶಾಸಕಿ ರೂಪಕಲಾಗೆ ಸರಕಾರದಲ್ಲಿ ಸ್ಥಾನಮಾಕ್ಕೆ ಮನವಿ

ಬೇತಮಂಗಲ.ಮೇ೧೭: ಕೆಜಿಎಫ್ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ೫೦ ಸಾವಿರ ಮತಗಳ ಅಂತರದಿಂದ ಶಾಸಕಿ ರೂಪಕಲಾ ಗೆಲುವಿಗೆ ಶ್ರಮಿಸಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ರಾಜ್ಯ ಮೀನುಗಾರರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ್ ಅವರನ್ನು ಟಿ.ಗೊಲ್ಲಹಳ್ಳಿ ಗ್ರಾಪಂಯ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಕಳ್ಳಿಕುಪ್ಪ ವೆಂಕಟಾಚಲಪತಿ ಮಾತನಾಡಿ, ಟಿ.ಗೊಲ್ಲಹಳ್ಳಿ ಗ್ರಾಪಂಯ ಪ್ರತಿಯೊಂದು ಗ್ರಾಮಸ್ಥರು ಸಹ ಶಾಸಕಿ ರೂಪಕಲಾ ಅವರು ೨ನೇ ಭಾರಿ ಗೆಲುವಿಗೆ ಹೆಚ್ಚಿನ ಮತಗಳನ್ನು ನೀಡಿ ಲೀಡ್ ನೀಡಿರುವ ಎಲ್ಲಾ ಮುಖಂಡರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದಲ್ಲಿ ಅತಿ ಹೆಚ್ಚು ಲೀಡ್ ದೊರಕಿದೆ, ಇತರೆ ಗ್ರಾಮಗಳಲ್ಲಿಯೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಶಾಸಕರ ಮರು ಆಯ್ಕೆಗೆ ಶ್ರಮಿಸಿದ್ದೀರಿ, ಮುಂದಿನ ದಿನಗಳಲ್ಲಿಯೂ ಸಹ ಒಗ್ಗಟ್ಟಿನಿಂದ ತಾಪಂ ಹಾಗೂ ಜಿಪಂ ಸೇರಿದಂತೆ ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿತರನ್ನು ಗೆಲ್ಲಿಸಿಕೊಳ್ಳಬೇಕೆಂದರು.
ತಾಲ್ಲೂಕಿನ ಅಭಿವೃದ್ಧಿಗಾಗಿ ೫೦ ಸಾವಿರ ಮತಗಳ ಅಂತರದಿಂದ ಶಾಸಕರನ್ನು ಗೆಲ್ಲಿಸಿರುವ ತಾಲ್ಲೂಕಿನ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಗ್ರಾಪಂ ಉಪಾಧ್ಯಕ್ಷ ಶ್ರೀರಾಮಪ್ಪ ಮಾತನಾಡಿ, ಗ್ರಾಪಂಯ ಎಲ್ಲಾ ಮುಖಂಡರು ಸಹ ಒಗ್ಗಟ್ಟಿನಿಂದ ಚುನಾವಣೆ ನಡೆಸಿದ ಫಲವಾಗಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಬಂದಿದೆ, ಶಾಸಕರ ಅಭಿವೃದ್ಧಿ ಕಾರ್ಯಗಳಿಗೆ ಜನರು ಕೈಹಿಡಿದಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದು, ತಾಲ್ಲೂಕು ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದರು.
ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್ ಮಾತನಾಡಿ, ಟಿ.ಗೊಲ್ಲಹಳ್ಳಿ ಗ್ರಾಪಂಯಲ್ಲಿ ಶಾಸಕಿ ರೂಪಕಲಾ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಡಿಸಿಸಿ ಬ್ಯಾಂಕಿನ ಬಡ್ಡಿ ರಹಿತ ಸಾಲ ಸೌಲಭ್ಯಕ್ಕೆ ಜನರು ಉತ್ತಮ ಫಲ ನೀಡಿದ್ದಾರೆ, ಗ್ರಾಪಂಯ ಎಲ್ಲಾ ಮುಖಂಡರ ನಿರಂತರ ಪರಿಶ್ರಮದಿಂದ ಜಯ ಸಿಕ್ಕಿದೆ ಎಂದರು.
ಚಿತ್ರ: ಮೇ.೧೭ ಬೇತಮಂಗಲ.೩ ಟಿ.ಗೊಲ್ಲಹಳ್ಳಿ ಗ್ರಾಪಂಯ ಕಾಂಗ್ರೆಸ್ ಮುಖಂಡರು ಮೀನುಗಾರರ ಸಹಕಾರ ಒಕ್ಕೂಟಗಳ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ್ ಅವರನ್ನುಯ ಸನ್ಮಾನಿಸಿದರು.