ಶಾಸಕಿ ಕನೀಜ್ ಫಾತೀಮಾಗೆ ಸಚಿವ ಸ್ಥಾನ ನೀಡಲು ಒತ್ತಾಯ

ಕಲಬುರಗಿ:ಮೇ.16: ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನರು ಬಹುಮತದಿಂದ ಆರಿಸಿ ತಂದಿದ್ದು, ಕಲಬುರಗಿ ಉತ್ತರ ಮತಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆಯಾದ ಅಲ್ಪಸಂಖ್ಯಾತರ ಸಮುದಾಯದ ಮಹಿಳಾ ಶಾಸಕಿ ಕನೀಜ್ ಫಾತೀಮಾ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿ ಅಧ್ಯಕ್ಷ ಕಾಂಗ್ರೆಸ್ ಯುವ ಮುಖಂಡರಾದ ದಸ್ತೇಗಿರ್ ಅಹ್ಮದ್ ಆಗ್ರಹಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸೌಹಾರ್ದತೆಗಾಗಿ ದಿವಂಗತ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಕೊಡುಗೆ ಮಹತ್ವದಾಗಿದೆ. ಶಾಸಕಿ ಕನೀಜ್ ಫಾತೀಮಾ ಪತಿ ದಾರಿಯಲ್ಲಿ ಮುನ್ನಡೆಯುತ್ತಿದ್ದು, ಕ್ಷೇತ್ರದ ಅಭಿವೃದ್ಧಿ ಮತ್ತು ಕಲಬುರಗಿ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ವಿವಿಧ ಸಚಿವ ಸ್ಥಾನದಲ್ಲಿ ಸಮರ್ಥರಾಗಿ ಕಾರ್ಯಾನಿರ್ವಹಿಸಿದ ದಿ. ಮಾಜಿ ಸಚಿವ ಖಮರುಲ್ ಇಸ್ಲಾಂ ಅವರಿಂದ ಬಹಳಷ್ಟು ಕಲಿತಿರುವ ಕನೀಜ್ ಫಾತೀಮಾಗೆ ಕಲಬುರಗಿ ಜನತೆ ಎರಡನೇ ಬಾರಿ ಬಹುಮತದೊಂದಿಗೆ ವಿಧಾನ ಸಭೆಗೆ ಕಳುಹಿಸಿದ್ದಾರೆ.

ಬಿಜೆಪಿ ಸರಕಾರ ಅವಧಿಯಲ್ಲಿ ಹಿಜಾಬ್ ವಿಷಯದಲ್ಲಿ ಮುಸ್ಲಿಂ ಮಹಿಳೆಯರ ತೇಜೂವಧೆ ಮಾಡಿರುವವರಿಗೆ ತಕ್ಕ ಉತ್ತರ ಮತ್ತು ಮುಸ್ಲಿಂ ಮಹಿಳೆಯರಲ್ಲಿ ವಿಶ್ವಾಸ ಮುಡಿಸುವ ನಿಟ್ಟಿನಲ್ಲಿ ಕನೀಜ್ ಫಾತೀಮಾಗೆ ಸಚಿವ ಸ್ಥಾನ ನೀಡಬೇಕೆಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ.