ಶಾಸಕಿ ಕನೀಜ್ ಫಾತೀಮಾಗೆ ಸಂಪುಟದಲ್ಲಿ ಸ್ಥಾನ ನೀಡಲು ಮನವಿ

ಕಲಬುರಗಿ:ಮೇ.18: ಬಿಜೆಪಿ ಸರಕಾರದಲ್ಲಿ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಹೆಸರಲ್ಲಿ ಶೋಷಣೆಗೆ ಯತ್ನಿಸಿರುವವರಿಗೆ ಮುಸ್ಲಿಂ ಮಹಿಳೆಯರಿಗೆ ಪ್ರೇರಣೆಯಾಗಿರು ಕಲಬುರಗಿ ಉತ್ತರ ಮತಕ್ಷೇತ್ರ ಶಾಸಕಿ ಕನೀಜ್ ಫಾತೀಮಾ ಅವರಿಗೆ ಮುಸ್ಲಿಂ ಮಹಿಳೆಗೆ ಪ್ರತಿನಿತ್ಯ ನೀಡುವ ನಿಟ್ಟಿನಲ್ಲಿ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಸಾಜಿದ ಅಲಿ ರಂಜೋಳ್ವಿ ಮತ್ತು ಪಕ್ಷದ ಮುಖಂಡರಾದ ಸೈಯದ್ ತೌಫೀಕ ದೆಸಾಯಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಸವ9ರಿಗೂ ಸಮಪಾಲು ಸಮಬಾಳು, ಜಾತ್ಯತೀತ, ಧಮ9ನಿರಪೇಕ್ಷ ಸಿದ್ಧಾಂತದ ಹಿನ್ನೆಲೆಯ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ರಾಜ್ಯದಲ್ಲಿ ಬಾರಿ ಬಹುಮತದಿಂದ ಆರಿಸಿತಂದಿದ್ದು, ಒರ್ವ ಅಲ್ಪಸಂಖ್ಯಾತರ ಮಹಿಳೆಯನ್ನು ಎರಡನೇ ಬಾರಿ ಬಹುಮತದಿಂದ ವಿಧಾನ ಸಭೆಗೆ ಕಳುಹಿಸಲಾಗಿದೆ. ಶಾಸಕಿ ಕನೀಝ ಫಾತೀಮಾವರು ಯಾವಾಗಲೂ ದಿವಾಂಗತ ಖಮರುಲ್ ಇಸ್ಲಾಂ ಅವರ ದಾರಿಯಲ್ಲಿ ನಡೆಯತ್ತಿದಾರೆ ಹಾಗೂ ಕಲಬುರ್ಗಿ ಉತ್ತರ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ದುಡಿದಯತ್ತಿದ್ದಾರೆ.

ಎಂದೂ ಸಚಿವ ಸ್ಥಾನಕ್ಕೆ ಆಸೆ ಪಡೆದ ಜನ ಸೇವೆ ಮಾಡುತ್ತಿರುವ ಶಾಸಕಿ ಕನೀಜ್ ಫಾತೀಮಾ ಅವರು ಪಕ್ಷಕ್ಕಾಗಿ ದುಡಿಯುವ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ತೊಡಗಿಸಿಕೊಂಡಿರುವ ನಿಷ್ಠಾವಂತೆ ಶಾಸಕಿ ಮತ್ತು ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಕನೀಜ್ ಫಾತೀಮಾ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.