ಶಾಸಕಾಂಗ, ಕಾರ್ಯಾಂಗ ಕಲುಷಿತಗೊಂಡಿದ್ದು, ಪತ್ರಿಕಾ ರಂಗ ಅರ್ಧದಷ್ಟು ಶುದ್ದವಾಗಿದೆ

ಕೆ.ಆರ್.ನಗರ, ಜ.05:- ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕಲುಷಿತಗೊಂಡಿದ್ದು, ಪತ್ರಿಕಾ ರಂಗ ಅರ್ಧದಷ್ಟು ಶುದ್ದವಾಗಿದೆ, ಇದನ್ನು ಉಳಿಸಿಕೊಳ್ಳಲು ಪತ್ರಕರ್ತರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಪತ್ರಕರ್ತರು ಸದಾ ಸತ್ಯವನ್ನೇ ಬರೆಯಬೇಕು ಎಂದರು.
ಪತ್ರಕರ್ತರು ಮಾಡುವ ವರದಿ ಮತ್ತು ಅವರುಗಳ ಮನಸ್ಸು ಶುದ್ದವಾಗಿರಬೇಕು ಆಗ ಮಾತ್ರ ಸಮಾಜವನ್ನು ಸರಿ ದಾರಿಗೆ ತರಲು ತಾವುಗಳು ಪ್ರಯತ್ನ ಮಾಡಬಹುದು ಎಂದು ಸಲಹೆ ನೀಡಿದ ಶಾಸಕ ಸಾ.ರಾ.ಮಹೇಶ್ ಈ ವಿಚಾರವನ್ನು ಪತ್ರಕರ್ತರು ಗಂಬೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು ನಗರದಲ್ಲಿ ಪತ್ರಕರ್ತರಿಗೆ ನಿವೇಶನ ನೀಡಲು ಈ ಹಿಂದೆ ಭರವಸೆ ನೀಡಲಾಗಿತ್ತು ಅದರಂತೆ ಈ ತಿಂಗಳ ಅಂತ್ಯದೊಳಗೆ ಪತ್ರಕರ್ತರಿಗೆ ನೀಡುವ ನಿವೇಶನದ ಲೇಔಟ್‍ಗೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದುತಿಳಿಸಿದ ಶಾಸಕರು ಕೊಟ್ಟ ಮಾತಿನಂತೆ ಪತ್ರಕರ್ತರಿಗೆ ನಿವೇಶನ ಕೊಡಲು ಬದ್ದನಾಗಿದ್ದೇನೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಯೂಟ್ಯೂಬ್ ವರದಿಗಾರರ ಹಾವಳಿಯಿಂದ ನಿರಂತರವಾಗಿ ಕೆಲಸ ಮಾಡುವ ಪತ್ರಕರ್ತರು ಯ್ಯೂಟೂಬ್ ಸೇರಿದಂತೆ ನಕಲಿ ಪತ್ರಕರ್ತರ ವಿರುದ್ದ ಹೋರಾಟ ಮಾಡಿ ಅಸ್ಥಿತ್ವ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಎಲ್ಲ ಪತ್ರಕರ್ತರು ಸಂಘಟನೆಗೆ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.
ಕೆ.ಆರ್.ನಗರ ತಾಲೂಕು ಪತ್ರಕರ್ತರ ಭವನಕ್ಕೆ ಪಿಠೋಪಕರಣ ಖರೀದಿ ಮಾಡಲು ಸರ್ಕಾರದಿಂದ ಹಣ ನೀಡುವಂತೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಯವರಿಗೆ ಈ ಹಿಂದೆ ಪದಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಲಾಗಿತ್ತು, ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಮೂಳೆತಜ್ಞ ಡಾ.ಮೆಹಬೂಬ್‍ಖಾನ್, ತಾಲೂಕು ಸಂಘದ ಅಧ್ಯಕ್ಷ ವಿ.ಸಿ.ಶಿವರಾಮು, ಪ್ರಧಾನ ಕಾರ್ಯದರ್ಶಿ ಎಂ.ಎಸ್.ರವಿಕುಮಾರ್, ಸಂಘದ ರಾಜ್ಯ ಸಮಿತಿ ನಿರ್ದೇಶಕ ಬಿ.ರಾಘವೇಂದ್ರ ಮಾತನಾಡಿದರು. ಸಂಘದ ವತಿಯಿಂದ ಸ್ತ್ರೀ ರೋಗ ತಜ್ಞರಾದ ಡಾ.ಚಂದ್ರಕಲಾ, ನಿವೃತ್ತ ಉಪನ್ಯಾಸಕ ಕೆ.ಆರ್.ಲಕ್ಕೇಗೌಡ, ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರಾದ ಪುಟ್ಟಯ್ಯ, ರಮೇಶ್, ಮರೀಯಾಮಿಸ್ ಅವರುಗಳನ್ನು ಸನ್ಮಾನಿಸಲಾಯಿತು.
ಹಿರಿಯ ಪ್ರರ್ತಕರ್ತ ಅಂಶಿಪ್ರಸನ್ನಕುಮಾರ್, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷಸಿ.ಪಿ.ರಮೇಶ್, ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ಕೆ.ದೀಪಕ್, ಮಾದ್ಯಮ ಅಕಾಡೆಮಿ ಸದಸ್ಯ ಸಿ.ಕೆ.ಮಹೇಂದ್ರ, ಜಿಲ್ಲಾ ಸಂಘದ ಉಪಾಧ್ಯಕ್ಷ ಧರ್ಮಾಪುರನಾರಾಯಣ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಮಣ್ಯ, ಗ್ರಾಮಾಂತರ ಕಾರ್ಯದರ್ಶಿ ಮಹದೇವ್, ಅರಕಲಗೂಡು ತಾಲೂಕು ಕಾಂಗ್ರೆಸ್ ಮುಖಂಡ ಹೆಚ್.ಎನ್.ವಿಜಯ್‍ರವರ ಪತ್ನಿ ಸವಿತಾ ಸೇರಿದಂತೆ ತಾಲೂಕು ಸಂಘದ ಪದಾಧಿಕಾರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಮತ್ತು ತಾಲ್ಲೂಕು ಪತ್ರಕರ್ತ ಸಂಘದ ಪದಾಧಿಕಾರಿಗಳಾದ ಹರೀಶ್, ಸಿ.ಸಿ.ಮಹದೇವ, ಭೇರ್ಯಮಹೇಶ್, ಕೆ.ಟಿ.ಮಂಜುನಾಥ್, ಕೆ.ಸಿ.ಮಹದೇವ, ದೊಡ್ಡಕೊಪ್ಪಲುವಿನಯ್, ಚೈತನ್ಯ, ನಾಟಿಕರ್, ಆನಂದ, ರೋಜಮಹೇಶ್, ಕೆ.ಟಿ.ರಮೇಶ್, ಚುಂಚನಕಟ್ಟೆಮಧು, ಯಶವಂತ, ನಾಗಣ್ಣ, ನಾಗೇಶ, ಶಂಕರ, ಮುಹಮ್ಮದ್ ಸಬೀರ್, ಸ್ಪಿನ್ ಕೃಷ್ಣಮೂರ್ತಿ, ಶ್ರೀನಿವಾಸ್, ಯೋಗನಂದ್, ಹಾಜರಿದ್ದರು.