ಶಾಸಕರ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಖಂಡನಿಯ

ಹುಮನಾಬಾದ್: ಮಾ.11:ಶಾಸಕ ರಾಜಶೇಖರ ಪಾಟೀಲ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಮಾಡುತ್ತಿರುವ ಸುಳ್ಳು ಆರೋಗಳು ಸಲ್ಲದು ಎಂದು ಬ್ಲಾಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಫ್ಸರಮಿಯ.
ಪಟ್ಟಣದ ಕಾಂಗ್ರೆಸ್ ಗೃಹ ಕಚೇರಿಯಲ್ಲಿ ಬ್ಲಾಕ ಕಾಂಗ್ರೆಸ್ ವತಿಯಿಂದ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಮಾ. 5ರಂದು ಶಾಸಕರ ಪುತ್ರ ಅಭೀಷೆಖ ಪಾಟೀಲ.
ಜನ್ಮದಿನ, ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಮಹಿಳೆಯರು ನಮ್ಮ ಆಮಂತ್ರಣ ಮೇರೆಗೆ ಆಗಮಿಸಿದ್ದಾರೆ. ಯಾವುದೇ ಆಮೀಷವೊಡ್ಡಿ ಕರೆತಂದಿಲ್ಲ. ಕುಕ್ಕರ್ ನೀಡುತ್ತೆವೆ ಎಂದು ನಾವು ಎಲ್ಲಿಯೂ ಹೇಳಿಲ್ಲ. ಆದರೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರರು ಕುಕ್ಕರ್ ಕಾಣಿಕೆ ನೀಡುತ್ತೆವೆಂದು ಕರೆತಂದಿದ್ದಾರೆದು ನೀಡುತ್ತಿರುವ ಹೇಳಿಕೆ ಅಫ್ಸರಮಿಯ ಖಂಡಿಸಿದರು.
ಹತ್ತು ಕೋಟಿ ವೆಚ್ಛದ ರಸ್ತೆ ಕಾಮಗಾರಿ ಚಾಲನೆ ನೀಡಲಾಗಿದೆ.ಈ ಕಾಮಗಾರಿಯ ಕಿಕ್ ಬ್ಯಾಕ್ ಪಡೆದು ಕುಕ್ಕರ್ ಹಂಚಿಕೆ ಮಾಡಿದ್ದಿರಿ ಎಂದು ಜೆಡಿಎಸ್ ಅಭ್ಯರ್ಥಿ ಸಿಎಂ. ಫೈಜ್ ನೀಡಿರುವ ಹೇಳಿಕೆಯನ್ನು ಸಾಬೀತು ಪಡಿಸಲಿ. ಶಾಸಕರು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಭಹಿರಂಗ ಸಭೆಗೆ ಬರಲಿ ಎಂದು ಸವಾಲು ಹಾಕಿದರು.
ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ, ತಾಪಂ. ಮಾಜಿ ಸದಸ್ಯ ಬಾಬು ಟೈಗರ್, ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ ಜಂಬಗಿ, ತಾಪಂ. ಮಾಜಿ ಸದಸ್ಯ ಕಂಟೆಪ್ಪ ದಾನ, ಸೇರಿದಂತೆ ಅನೇಕರಿದ್ದರು.