ಶಾಸಕರ ವಾಹನ ತಪಾಸಣೆ ಮಾಡಿದ ಚೆಕ್ ಪೆÇೀಸ್ಟ್ ಸಿಬ್ಬಂದಿ

ಅಫಜಲಪುರ: ಎ.8:ತಾಲೂಕಿನ ಗಡಿ ಗ್ರಾಮ ಜೇವರ್ಗಿ (ಬಿ) ಗ್ರಾಮದಲ್ಲಿ ಶುಕ್ರವಾರ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮಕ್ಕೆ ಭಾಗಿಯಾಗಲು ಶಾಸಕ ಎಂ.ವೈ ಪಾಟೀಲ್ ಅವರು ತಮ್ಮ ಕಾರಿನಲ್ಲಿ ಕಾರ್ಯಕರ್ತರೊಂದಿಗೆ ತೆರಳುವ ಸಂದರ್ಭದಲ್ಲಿ ಸೊನ್ನ ಚೆಕ್ ಪೆÇೀಸ್ಟ್ ಬಳಿ ಸಿಬ್ಬಂದಿಗಳು ಶಾಸಕರ ವಾಹನವನ್ನು ತಡೆದು ತಪಾಸಣೆ ಮಾಡಿದರು.
ಈ ವೇಳೆ ಸಿಬ್ಬಂದಿಗಳ ಕರ್ತವ್ಯಕ್ಕೆ ಸಹಕರಿಸಿದ ಶಾಸಕ ಎಂ.ವೈ ಪಾಟೀಲ್ ತಪಾಸಣೆ ಮಾಡುವಂತೆ ಸಹಕರಿಸಿದರು.
ರಾಜ್ಯದಲ್ಲಿ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಅಫಜಲಪುರ ತಾಲೂಕಿನ ಸುಮಾರು 6 ಭಾಗಗಳಲ್ಲಿ ಚೆಕ್ ಪೆÇೀಸ್ಟ್ ಹಾಕಲಾಗಿದೆ. ಪೆÇಲೀಸ್ ಸಿಬ್ಬಂದಿಗಳು, ಎಸ್.ಎಸ್.ಟಿ ತಂಡ ಹಾಗೂ ಅರೆ ಸೇನಾ ಪಡೆಯಿಂದ ಬಿಗಿ ಭದ್ರತೆಯೊಂದಿಗೆ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.