ಶಾಸಕರ ಮುಖಂಡರ ಜೊತೆ ದೇವೇಗೌಡ,ಕುಮಾರಸ್ವಾಮಿ ಚರ್ಚೆ

ರಾಯಚೂರು, ಜೂ.೫- ಇಂದು ಜಿಲ್ಲೆಯ ಪಕ್ಷದ ಸ್ಥಿತಿ -ಗತಿ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡರವರು ಜಿಲ್ಲಾ ಶಾಸಕರು ಮತ್ತು ಪ್ರಮುಖ ಮುಖಂಡರ ಜೊತೆ ಚರ್ಚಿಸಿದರು.
ಮಾಜಿ ಸಚಿವ ಶಾಸಕ ನಾಡಗೌಡ ಮಾತನಾಡಿ ಕರೋನ ನಿಯಂತ್ರಣಗೊಂಡ ಮೇಲೆ ಪಕ್ಷ ಸಂಘಟನೆಯ ಮಾಡಲಾಗುವದು ಮಾಜಿ ಪ್ರಧಾನಿ ದೇವೇಗೌಡರವರ ಪ್ರಧಾನಿ ಮಂತ್ರಿಯಾಗಿ ೨೫ ವರ್ಷಗಳ ಸಂಭ್ರಮ ಕಾರ್ಯಕ್ರಮ ಜಿಲ್ಲಾಂದ್ಯತ ಹಮ್ಮಿಕೊಳ್ಳಲಾಗುವುದು. ಪಾದೇಶಿಕ ಪಕ್ಷದ ಅವಶ್ಯಕತೆ ಬಗೆ ಜನರಲ್ಲಿ ಜಾಗೃತ ಗೊಳಿಸಲಾಗುವುದು ಎಂದರು. ಜಿಲ್ಲಾ ಅಧ್ಯಕ್ಷ ಎಂ ವಿರುಪಕ್ಷಿ ಮಾತನಾಡಿ.ಕರೋನ ರೋಗ ಕಡಿಮೆ ಆದ ತಕ್ಷಣವೇ ಮುಂಬರುವ ಜಿಲ್ಲಾ ಪಂಚಾಯಿತಿಯ ತಾಲ್ಲೂಕು ಪಂಚಾಯಿತಿಯ ಚುನಾವಣೆಯ ಅಂಗವಾಗಿ ಪಕ್ಷ ಸಂಘಟನೆಯ ಮಾಡಲಾಗುವುದು. ಈ ಬಗ್ಗೆ ಪ್ರತಿ ವಿಭಾಗದಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗುವುದು. ಬಿಜೆಪಿ ಸರ್ಕಾರದ ವೈಫಲ್ಯ ಜನತೆ ಮುಂದಿಟ್ಟು ಹೋರಾಟ ರೂಪಿಸುವಲಾಗುವುದು ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷ ಎನ್ ಶಿವಶಂಕರ ವಕೀಲ ಮಾತನಾಡಿ. ರಾಯಚೂರ ಜಿಲ್ಲಾ ಆಡಳಿತ ವೈಫಲ್ಯ ಮತ್ತು ಉಸ್ತಾವರಿ ಸಚಿವರ ವಿರುದ ನಿರಂತರ ಪಕ್ಷದಿಂದ ಹೋರಾಟ ಮಾಡಿದ ಕಾರಣ ಈಗ ಪಕ್ಷದ ಸಂಘಟನೆಯ ಸುಧಾರಿಸಿದೆ ಪ್ರತಿ ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯ ಮಾಡಲಾಗುವುದು ಯುವಕರಿಗೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ನೀಡಬೇಕೆಂದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಮರೇಶ್ ಪಾಟೀಲ್,ವಿಶ್ವನಾಥ್ ಪಟ್ಟಿ,ಸೇರಿದಂತೆ ಇತರರು ಉಪಸ್ಥಿತರಿದ್ದರು.