ಶಾಸಕರ ಮುಂದೆ ಗೋಳಾಡಿದ ಸೋಂಕಿತ ವ್ಯಕ್ತಿ

ದಾವಣಗೆರೆ.ಮೇ.೨೦: ನನ್ನನ್ನು ಬದುಕಿಸಿ ಕೊರೊನಾದಿಂದ ಮುಕ್ತಗೊಳಿಸಿ ಎಂದುಹೊನ್ನಾಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿತ ವ್ಯಕ್ತಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಮುಂದೆ ಗೋಳಾಡಿದ್ದಾನೆ..ಇಂದು ಬೆಳಗ್ಗೆ ಶಾಸಕರು ಹೊನ್ನಾಳಿಯ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸುವಾಗ ಈ ಘಟನೆ ನಡೆದಿದೆ.ಶಾಸಕ ಎಂಪಿಆರ್  ಪ್ರತಿನಿತ್ಯ ಕೊರೊನಾ ಸೋಂಕಿತರಿಗೆ ಉಪಹಾರ ನೀಡಿ, ಆರೋಗ್ಯ ವಿಚಾರಿಸುತ್ತಿದ್ದಾರೆ.ಇಂದು ಆಸ್ಪತ್ರೆಗೆ ಭೇಟಿ ನೀಡದ ವೇಳೆ ಸೋಂಕಿತ ವ್ಯಕ್ತಿ ರವಿ ಎಂಬಾತ ನನ್ನನ್ನು ಬದುಕಿಸಿ ಎಂದು ಗೊಳಾಡಿದ್ದಾನೆ.ಸೋಂಕಿತನ ನರಳಾಟ ಕಂಡು ಶಾಸಕರು ಸಾಂತ್ವಾನ ಹೇಳಿದ್ದಾರೆ.