ಶಾಸಕರ ಮನೆ ಆವರಣದಲ್ಲಿನ ಗಂಧದ ಮರ ಕಳ್ಳತನಕ್ಕೆ ಯತ್ನ

ವಿಜಯಪುರ ನ 14: ಜಿಲ್ಲೆಯ ನಾಗಠಾಣ ಶಾಸಕ ದೇವಾನಂದ ಚೌವ್ಹಾನ್ ಮನೆಯ ಆವರಣದಲ್ಲಿನ ಗಂಧದ ಮರ ಕಳ್ಳತನಕ್ಕೆ ಖದೀಮರು ಯತ್ನಿಸಿರುವ ಘಟನೆ ನಡೆದಿದೆ. ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ರ ಮನೆಯಲ್ಲಿ ಇಂದು ನಸುಕಿನ ಜಾವ ಗಂಧದ ಮರ ಕಳ್ಳತನಕ್ಕೆ ಯತ್ನ ನಡೆದಿದ್ದು, ಗಂಧದ ಮರ ಕತ್ತರಿಸುವ ವೇಳೆ ಮನೆಯವರು ಎಚ್ಚರಗೊಳ್ಳುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದರು. ಕಳ್ಳರು ಬುಡಸಮೇತ ಕತ್ತರಿಸಿದ ಗಂಧದ ಮರವನ್ನು ಬಿಟ್ಟು ಓಡಿಹೋಗಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.