ಶಾಸಕರ ಭವನ: ೬ ದಿನಗಳ ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮ

ರಾಯಚೂರು, ಜ.೧೭- ಸ್ವ ಸಹಾಯ ಗುಂಪಿನ ಸದಸ್ಯರುಗಳು ಉದ್ಯಮಶೀಲತೆ ತಿಳುವಳಿಕೆ ಕರ?ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಸೈಯದ್ ಪಟೇಲ್ ಅವರು ಹೇಳಿದರು.
ಇಂದು ಪಟ್ಟಣದ ಶಾಸಕರ ಭವನದಲ್ಲಿ ಕೌಶಲ್ಯ ಅಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಬೆಂಗಳೂರು, ತಾಲೂಕು ಪಂಚಾಯತ್ ಮಾನವಿ, ಸಂಜೀವಿನಿ ತಾಲೂಲು ಅಭಿಯಾನ ನಿವಾ೯ಹಣ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ೬ ದಿನಗಳ ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವ ಸಹಾಯ ಗುಂಪುಗಳ ಸದಸ್ಯರುಗಳು ಕಂಡಿರುವ ಕನಸುಗಳು ನನಸಾಗಲಿ. ಸ್ವಯಂ ಉದ್ಯಮ ಮಾಡುವ ನಿರ್ಧಾರ ಕೈಗೊಂಡಲ್ಲಿ ಸರ್ಕಾರದ ವಿವಿಧ ಇಲಾಖೆ ಹಾಗೂ ನಿಗಮಗಳಲ್ಲಿ ಸಹಾಯ ಸೌಲಭ್ಯ ಒದಗಿಸುವ ಹಲವಾರು ಯೋಜನೆಗಳಿದ್ದು, ಅವುಗಳ ಪ್ರಯೋಜನ ಪಡೆದು ಯಶಸ್ವಿ ಉದ್ಯಮದಾರರಾಗಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬಹುದಾಗಿದೆ ಎಂದರು.
ಸ್ವಾವಲಂಬಿ ಜೀವನ ನಡೆಸಲು ಹಾಗೂ ಕುಟುಂಬದ ಆರ್ಥಿಕ ಮಟ್ಟ ಸುಧಾರಿಸಲು ಉದ್ಯಮಶೀಲತೆ ಜ್ಞಾನ ಪಡೆಯುವುದು ಅತ್ಯವಶ್ಯಕ. ಕೇಂದ್ರ ಹಾಗೂ ರಾಜ್ಯ ರ?ಕಾರದವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ತಿಳಿಸಿದರು.
ಪ್ರಸ್ತಾವಿಕವಾಗಿ ಎನ್.ಆರ್.ಎಲ್.ಎಮ್ ತಾಲೂಕು ಯೋಜನ ವ್ಯವಸ್ಥಾಪಕರಾದ ಶಿವರಾಜ ಮಾತನಾಡಿ ತರಬೇತಿಯಲ್ಲಿ ಉದ್ಯಮಶೀಲರ ಗುಣಲಕ್ಷಣಗಳು, ಉದ್ಯಮ ಆರಂಭಿಸಲು ಇರುವುತಂಹ ಅವಕಾಶಗಳನ್ನು ಗುರುತಿಸುವುದು ಹೇಗೆ ಮತ್ತು ಸವಾಲುಗಳನ್ನು ಎದುರಿಸುವ ಬಗ್ಗೆ ಕುರಿತು ಮಾಹಿತಿ ನೀಡುವುದರ ಜೊತೆಗೆ ಉದ್ಯಮದಾರರಿಗೆ ಅವಶ್ಯಕತೆ ಸಂಪೂರ್ಣ ಮಾಹಿತಿಯನ್ನು ಈ ತರಬೇತಿಯಲ್ಲಿ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎನ್.ಆರ್.ಎಲ್.ಎಮ್ ಜಿಲ್ಲಾ ವ್ಯವಸ್ಥಾಪಕರಾದ ಶೀಕ್ರಾಂತ ಬನ್ನಿಗೋಳ, ವಲಯ ಮೇಲ್ವಿಚಾರಕ ಸೂರತ್ ಪ್ರಸಾದ ಗಟ್ಟು, ಸಂಪನ್ಮೂಲ ವ್ಯಕ್ತಿ ಶಶಿಧರ ಕಂಬಾಳಿಕರ, ನರಸರೆಡಿ, ಪದ್ಮಾ ರವರು ಕಾರ್ಯಕ್ರಮ ನಿರೂಪಿಸಿದರು.