ಶಾಸಕರ ಬಳಿ ಸಮಸ್ಯೆ ಹೇಳಿಕೊಂಡ ಗ್ರಾಮಸ್ಥರು

ಹರಪನಹಳ್ಳಿ.ಜು.೨೧: ನಮಗೆ ಮನೆ ಇಲ್ಲ, ರಸ್ತೆ ಸರಿಪಡಿಸಿಕೊಡಿ, ಚರಂಡಿ ಹೂಳು ತೆಗೆಸಿ, ನಮಗೆ ಪಿಂಚಣಿ ಕೊಡಿಸಿ…..ಇದು ತಾಲೂಕಿನ ತೆಲಿಗಿ ತಿಮ್ಮಾಪುರ, ತೆಲಿಗಿ ಹಾಗೂ ದುಗ್ಗಾವತಿ ಗ್ರಾಮಗಳಲ್ಲಿ ಶಾಸಕರ ನಡೆ, ಶಾಸಕ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿ.ಕರುಣಾಕರರೆಡ್ಡಿ ಯವರಿಗೆ ಗ್ರಾಮಸ್ಥರು ಹೇಳಿಕೊಂಡ ಸಮಸ್ಯೆಗಳು.ಆರಂಭದಲ್ಲಿ ತೆಲಿಗಿ ಗ್ರಾಪಂ ವ್ಯಾಪ್ತಿಯ ತೆಲಿಗಿತಿಮ್ಲಾಪುರ ಗ್ರಾಮದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ನಂತರ ತೆಲಿಗಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಕಾಲೋನಿಗಳಲ್ಲಿ ಸ್ಥಳೀಯರ ಸಮಸ್ಯೆಗಳನ್ನು ಕೇಳುತ್ತಿರುವಾಗ ಬಹುತೇಕರು ನಮಗೆ ರಸ್ತೆ ಮಾಡಿಸಿಕೊಡಿ, ಮನೆಗಳು ಇಲ್ಲ, ಮನೆಗೆ ಹಣ ಕಟ್ಟಲಿಕ್ಕೆ ಸಾಕಾಗುತ್ತಿಲ್ಲ, ಚರ0ಡಿ ಹೂಳು ತೆಗೆಸಲು ಹೇಳಿ ಸಾರ್ ಎಂದು ಸಮಸ್ಯೆಗಳನ್ನು ಹೇಳಿಕೊಂಡರು. ಶಾಸಕರು ಸ್ಥಳದಲ್ಲಿ ತಹಸೀಲ್ದಾರ್, ಕಂದಾಯ ಅಧಿಕಾರಿಗಳೊಂದಿಗೆ ಸಮಲೋಚಿಸಿ ಸರ್ಕಾರದ ಜಾಗವನ್ನು ಹದ್ದುಬಸ್ತು ಮಾಡಿಸಿ ಖಾಸಗಿ ವ್ಯಕ್ತಿಗಳಿದ್ದರೆ ತೆರವುಗೊಳಿಸಿ ಮನೆಇಲ್ಲದವರಿಗೆ ಪಟ್ಟಿ ಮಾಡಿ ಎ0ದು ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ರಸ್ತೆ ಕಾಮಗಾರಿಗೆ ಎಂಜಿನಿಯರ್‌ಗೆ ಅಳತೆ ಮಾಡಿ ಕ್ರಿಯಾಯೋಜನೆ ರೂಪಿಸಲು ತಿಳಿಸಿದರು.ದುಗ್ಗಾವತಿ ಗ್ರಾಮದಲ್ಲಿ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿದ ನಂತರ ಸ್ಥಳೀಯರಿಗೆ ಮನೆ ಮನೆಗೂ ಕುಡಿಯುವ ನೀರಿನ ನಳಗಳನ್ನು ಅಳವಡಿಸುವ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದರು. ಬಳಿಕ ರಸ್ತೆಯಲ್ಲಿ ಶಿಥಿಲಗೊಂಡ ಓವರ್ ಹೆಡ್ ಟ್ಯಾಂಕ್ ಪರಿಶೀಲಿಸಿ, ಅದನ್ನು ತೆರವುಗೊಳಿಸಿ ಹೊಸದಾಗಿ ಕ್ರಿಯಾಯೋಜನೆ ಸಲ್ಲಿಸಿ ಎಂದು ತಿಳಿಸಿದರು. ಎಇಇ ಸಿದ್ದರಾಜುಗೆ ತಿಳಿಸಿದ್ದರುಗ್ರಾಮ ಪಂಚಾಯಿತಿ ಬಳಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದು. 20ಕ್ಕೂ ಹೆಚ್ಚು ಜನರಿಗೆ ಪಿಂಚಣಿ ಬರುತ್ತಿಲ್ಲ ಎಂದು ಶಾಸಕರ ಗಮನಕ್ಕೆ ತಂದರು. ಕೂಡಲೇ ತಹಸೀಲ್ದಾರರು, ಕಂದಾಯ ಅಧಿಕಾರಿಗಳನ್ನು ಕರೆದು ಕೇಳಿದಾಗ ಆದೇಶ ಪತ್ರಗಳು ಸಿದ್ಧವಾಗಿವೆ ಎಂದಾಗ ಇವತ್ತು ಕೊಡಬಹುದಿತ್ತಲ್ಲ ಯಾಕೆ ಎಂದು ಕೇಳಿ, ನಾಳೆ ಅವರಿಗೆ ಆದೇಶ ಪತ್ರಗಳನ್ನು ನೀಡಿ ಎಂದರು. ಅಲ್ಲದೆ, ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎ0ದು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ಶಿವಕುಮಾರ ಬಿರಾದಾರ, ಇಒ ಪ್ರಕಾಶ, ಗ್ರಾಪಂ ಅಧ್ಯಕ್ಷ ವಿಶ್ವನಾಥ, ಎಇಇ ಸಿದ್ದರಾಜ, ಕೃಷಿ ಸಹಾಯಕ ನಿರ್ದೇಶಕ ಗೊಂದಿ ಮ0ಜುನಾಥ, ಮುಖಂಡರಾದ ವಿಷ್ಣುವರ್ಧನ್ ರೆಡ್ಡಿ, ಕಣಿವಿಹಳ್ಳಿ ಮ0ಜುನಾಥ, ಎಂ.ಮಲ್ಲೇಶ್, ಶಿರಗಾನಹಳ್ಳಿ ವಿಶ್ವನಾಥ, ಶಾಸಕರ ಆಪ್ತ ಕಾರ್ಯದರ್ಶಿ ಹೆಚ್.ಎಸ್ ಹೇಮಂತಕುಮಾರ, ಭಂಗಿ ಚಂದ್ರಪ್ಪ, ಸಿದ್ದೇಶ್ ರೆಡ್ಡಿ , ಭೀಮಪ್ಪ, ಸುರೇಶಪ್ಪ, ಯೋಗಿಶ್, ಗ್ರಾಮಸ್ಥರು, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂಗಳು ಇದ್ದರು.