ಸಿಂಧನೂರು,ಜು.೧೦-
ಶಾಸಕ ಹಂಪನಗೌಡ ಬಾದರ್ಲಿ ಖಾಸಗಿ ಶಾಲೆಗಳಿಗೆ ಸರ್ಕಾರ ಅನುದಾನ ಕೊಡುವಂತೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿ, ಖಂಡಿಸಿ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಿಂದ ಹೋರಟ ಪ್ರತಿಭಟನಾ ಮೆರವಣಿಗೆ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವಂತೆ ಅಗ್ರಹಿಸಿ ಶಿಕ್ಷಣ ಹಾಗೂ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿ ತಹಸೀಲ್ದಾರ ಕಚೇರಿಯ ತನಕ ಪ್ರತಿಭಟನೆ ಮೆರವಣಿಗೆಯನ್ನು ನಡೆಸಿದರು.
ಶಾಸಕ ಹಂಪನಗೌಡ ಬಾದರ್ಲಿ ಖಾಸಗಿ ಶಾಲೆಗಳ ಮೇಲೆ ತೋರಿಸುವ ಪ್ರೀತಿ ಅದೆ ಸರ್ಕಾರಿ ಶಾಲೆಗಳ ಮೇಲೆ ಯಾಕೆ ಇಲ್ಲ ಖಾಸಗಿ ಶಾಲೆಗಳಿಗೆ ಅನುದಾನ ಕೊಡುವಂತೆ ಸರ್ಕಾರ ಕ್ಕೆ ಪತ್ರ ಬರೆದಿದ್ದು ಖಂಡನೀಯ ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯಧ್ಯಕ್ಷರಾದ ಬಸವರಾಜ ಬಡಿಗೇರ ಶಾಸಕರ ನಡೆ ಖಂಡಿಸಿ ಮಾತನಾಡಿದರು.
ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಸೇರಿದಂತೆ ಸರ್ಕಾರಿ ಪದವಿಪೂರ್ವ, ಶಿಕ್ಷಕರ ತರಬೇತಿ ಸಂಸ್ಥೆ ಹಾಗೂ ಕಾಲೇಜಗಳಲ್ಲಿ ಶಿಕ್ಷಕರ, ಉಪ ನ್ಯಾಸಕರ ಕೊರತೆ, ಕಟ್ಟಡ, ಕುಡಿಯುವ ನೀರು, ಶೌಚಾಲಯಗಳ ಸಮಸ್ಯೆಗಳನ್ನು ಈಡೇರಿಸುವಂತೆ ಶಾಸಕರು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಒತ್ತಾಯ ಮಾಡದೆ ಖಾಸಗಿ ಶಾಲೆ ಕಾಲೇಜಗಳಿಗೆ ಅನುದಾನ ಕೊಡುವಂತೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಸರ್ಕಾರಿ ಶಾಲೆ ಕಾಲೇಜಗಳ ವಿರೋಧಿ ನೀತಿ ಅನುಸರಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಆಸಕ್ತಿ ತೋರಿಸಿದ್ದು ಎಷ್ಷು ಸರಿ ಖಾಸಗಿ ಶಾಲೆಗಳು ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹ ಶಾಸಕರು ಪತ್ರ ಬರೆಯಬೇಕಾಗಿತ್ತು ಬಸವರಾಜ ಬಡಿಗೇರ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದರು.
ಜಯ ಕರ್ನಾಟಕ ಸಂಘಟನೆಯ ತಾಲೂಕು ಕಾರ್ಯಧ್ಯಕ್ಷರಾದ ರಾಮದಾಸ, ಹನುಮಂತ ಬೂದಿವಾಳ, ಒಬಳೇಶ, ನಾಗಪ್ಪ, ರಾಮಣ್ಣ, ಪಂಪಾಪತಿ, ವಿರೇಶ ತಹಸೀಲ್ದಾರ, ನಿಂಗಪ್ಪ, ಆಂಜನೇಯ, ವಿಘ್ನೇಶ ಕೆಂಗಲ್, ಶಶಿಕುಮಾರ, ಮೌನೇಶ ಬಡಿಗೇರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಸಿದ್ದರು.