ಶಾಸಕರ ನೇತೃತ್ವದಲ್ಲಿ ವಿವಿಧ ಪಕ್ಷ ತೊರೆದು ಬಿಜೆಪಿ ಸೇರಿದ ಮುಖಂಡರು

ದೇವದುರ್ಗ.ಜು.೨೨- ಪಟ್ಟಣದ ಚಂದನಕೇರಿ ವಾರ್ಡಿನ ಯುವಕರು ಸೇರಿದಂತೆ ಅನೇಕ ಮುಖಂಡರು ಶಿವನಗೌಡ ನಾಯಕ ಅವರ ಜನಪರ ಆಡಳಿತವನ್ನು ಮೆಚ್ಚಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಗುರುವಾರದಂದು ಬೆಂಗಳೂರಿನಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಾಸಕರ ನೇತೃತ್ವದಲ್ಲಿ ಮುಖಂಡರಾದ ಹನುಮಂತ್ರಾಯ ಮೇಸ್ತ್ರಿ ಚಂದನಕೇರಿ ಸೇರಿದಂತೆ ವಾರ್ಡಿನ ೨೦ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ನೂತನ ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕುವ ಮೂಲಕ ಸೇರ್ಪಡೆ ಮಾಡಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಜಹೀರ್ ಪಾಷಾ ಇಡಪನೂರು, ಮಲ್ಲಿಕಾರ್ಜುನ ಹಿರೇಬೂದುರು, ನಾಗರಾಜ ಬೋಗಿ, ದೇವಪ್ಪ ಕೋರಿ, ಸಣ್ಣ ಪೂಜಾರಿ, ಶಿವಪ್ಪ, ಚೆನ್ನಪ್ಪ, ಶಿವು, ಗುರು, ಮಂಜುನಾಥ, ಅಳವಳಪ್ಪ, ಹನುಮಂತ, ಅಂಬರೀಶ್, ಬಸವಲಿಂಗಪ್ಪ, ಯಲ್ಲಪ್ಪ, ದುರ್ಗಪ್ಪ ನಗರಗುಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.