ಶಾಸಕರ ನೂತನ ಜನಸಂಪರ್ಕ ಕಛೇರಿ ಉದ್ಘಾಟನೆ.

ಜಗಳೂರು.ಜೂ.೪ :- ಇಲ್ಲಿನ ಪಟ್ಟಣ ಪಂಚಾಯಿತಿ ಹಳೇ ಕಟ್ಟಡದಲ್ಲಿ ಶಾಸಕ ಬಿ.ದೇವೇಂದ್ರಪ್ಪ  ನೂತನ ಜನಸಂಪರ್ಕ ಕೇಂದ್ರ ಕಛೇರಿ ಉದ್ಘಾಟಿಸಿದರುಈ ವೇಳೆ ಮಾತನಾಡಿದ ಅವರು ಸಾರ್ವಜನಿಕರ ಕಷ್ಟ ಸುಖಗಳು ಮತ್ತು ಸರಕಾರಿ ಸೌಲಭ್ಯ ಕ್ಕಾಗಿ ಅಲೆದಾಟ ತಪ್ಪಿಸಲು ಪಟ್ಟಣದ ಹೃದಯಭಾಗದಲ್ಲಿರುವ ಬ್ರಿಟಿಷರ ಕಾಲದ ಕಟ್ಟಡವಾಗಿದೆ ಹಿಂದೆ ನಡೆಯುತ್ತಿದ್ದ ಪಟ್ಟಣ ಪಂಚಾಯಿತಿ ಹಳೇ ಕಟ್ಟಡವನ್ನು ಜನ ಸಂಪರ್ಕ ಕೇಂದ್ರವ ನ್ನಾಗಿ ಪರಿವರ್ತಿಸಿದ್ದು.ಕ್ಷೇತ್ರದ ಜನರು ತಮ್ಮ ಅಹವಾಲುಗಳನ್ನು ಹಾಗೂ ಇತರೆ ಸರಕಾರಿ ಇಲಾಖೆಗಳ ಸೌಲಭ್ಯ ಕ್ಕಾಗಿ ಅರ್ಜಿಸಲ್ಲಿಸಬಹುದು.5 ಜನ ಕಂಪ್ಯೂಟರ್ ಆಪರೇಟರ್ ಗಳನ್ನು ನಿಯೋಜಿಸಲಾಗಿದೆ.ಕ್ಷೇತ್ರದಲ್ಲಿ ಅಭಿವೃದ್ದಿ ನನ್ನ ಗುರಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವೆ ಅಧಿಕಾರಿಗಳು ಸಕಾಲ ದಲ್ಲಿ ಸ್ಪಂದಿಸಬೇಕು.ವಿಳಂಬನೀತಿ ಅನುಸರಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.ಜನಸಂಪರ್ಕ ಕೇಂದ್ರ ಉದ್ಘಾಟಿಸಿ ನಂತರ ಬುದ್ದ ಬಸವ ಅಂಬೇಡ್ಕರ್ ಭಾವಚಿತ್ರಗಳಿಗೆ ನಮನ ಸಲ್ಲಿಸಿದರು.