ಶಾಸಕರ ನೂತನ ಕಛೇರಿ ಉದ್ಘಾಟನೆ

ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.11:- ಪಟ್ಟಣದ ತಾಲ್ಲೂಕು ಪಂಚಾಯತಿ ಕಟ್ಟಡದಲ್ಲಿ ಶಾಸಕ ದರ್ಶನ್ ದೃವ ನಾರಾಯಣ್ ನೂತನ ಕಛೇರಿಯನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಲಾಗಿತ್ತು.
ಸುಮಾರು ಲಕ್ಷ ರೂ ಗಳಲ್ಲಿ ಶಾಸಕರ ಕೊಠಡಿಯನ್ನು ನವೀಕರಿಸಲಾಯಿತು
ನಂತರ ಮಾತಾನಾಡಿದ ಶಾಸಕ ದರ್ಶನ ದೃವ ನಾರಾಯಣ ಸರ್ಕಾರಿ ರಾಜ ದಿನಗಳನ್ನು ಹೂರತ್ತು ಪಡಿಸಿ ಎಲ್ಲಾ ದಿನಗಳಲ್ಲಿ ಮುಂಜಾನೆ 10 ರಿಂದ ಸಂಜೆ 4 ರ ತನಕ್ಕ ಕಛೇರಿಯಲ್ಲಿ ಕ್ಷೇತ್ರದ ಸಾರ್ವಜನಿಕರ ಅಹವಲುಗಳನ್ನು ಸ್ವೀಕರಿಸಲಾಗುವುದು ಹವಾಲಗಳನ್ನು ಸ್ವೀಕರಿಸಲು ಕಚೇರಿಯಲ್ಲಿ ಪ್ರತ್ಯೇಕವಾಗಿ ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ವಾರದಲ್ಲಿ 2 ದಿನಗಳು ಜನ ಸಂಪರ್ಕ ಸಭೆ ನಡೆಸಲಾಗುತ್ತದೆ ಕ್ಷೇತ್ರದ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸಲು ಪ್ರಯತ್ನಿಸುತ್ತೇನೆ
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಧಿಕಾರಿ ರಾಜೇಶ್ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಧೀರನ್ ದ್ರುವ ನಾರಾಯಣ್ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬ್ಲಾಕ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ಶಂಕರ್ ಶ್ರೀಕಂಠ ನಾಯಕ ಮುಖಂಡರಾದ ಖಾದರ್ ಮಂಜುನಾಥ್ ಲತಾ ಸಿದ್ಧ ಶೆಟ್ಟಿ ನಾಗರಜಯ ದೇಬೂರು ಅಶೋಕ್ ಶ್ರೀನಿವಾಸ್ ಮೂರ್ತಿ ಶಿವಪ್ಪ ದೇವರು ವಿಜಿ ಕುಮಾರ್ ಚೆಲುವರಾಜು ಹಾಗೂ ಇನ್ನಿತರರು ಇದ್ದರು.