ಶಾಸಕರ ನಿವಾಸಕ್ಕೆ ಡಿಸಿಎಂ ಭೇಟಿ

ದಾವಣಗೆರೆ.ಜ.೭; ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ  ಜಗಳೂರಿನ ಶಾಸಕರು ಹಾಗೂ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪ ಅವರ ದಾವಣಗೆರೆ ನಿವಾಸಕ್ಕೆ ಭೇಟಿ ನೀಡಿ ಗೌರವ ಆತಿಥ್ಯ ಸ್ವೀಕರಿಸಿದರು ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್  ಬಿ ಜೆ ಅಜಯ್ ಕುಮಾರ್, ಶಾಸಕರಾದ ಪ್ರೊ. ಲಿಂಗಣ್ಣ, ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಶಾಂತಕುಮಾರಿ ಶಶಿಧರ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷೆಯಾದ ಜಯರಾಮ್, ಚಟ್ನಿಹಳ್ಳಿ ರಾಜಪ್ಪ , ಸೊಕ್ಕೆ ನಾಗರಾಜ್, ಫಣಿಯಾಪುರ ಲಿಂಗರಾಜ್  ಉಪಸ್ಥಿರಿದ್ದರು.