ಶಾಸಕರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ

ಹರಪನಹಳ್ಳಿ.ಜು.೨೫: ಶಾಸಕರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ನಡೆಸುತ್ತಿರುವ ಕರುಣಾಕರ ರೆಡ್ಡಿ ಅವರು ಇಷ್ಟು ದಿನ ಯಾವ ಕಡೆಗೆ ಇದ್ದರು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಲೇವಡಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.ತಾಲ್ಲೂಕಿನಲ್ಲಿ ಅರವತ್ತು ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ, ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೆಜ್, ಪಟ್ಟಣದ ಒಳಚರಂಡಿ ಯೋಜನೆ, ಕೋರಿಯಾ ಮಾದರಿ ಸಬ್ ಜೈಲು, ಪೊಲೀಸ್ ಮೀಸಲು ಪಡೆ ತರಬೇತಿ ಕೇಂದ್ರದಲ್ಲಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದು ವಿವರಿಸಿದರು.ಈ ಎಲ್ಲ ಕಾಮಗಾರಿ ಪೂರ್ಣ ಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡುವುದನ್ನು ಬಿಟ್ಟು, ಈಗ ದಿಡೀರ್ ನಿದ್ದೆ ಯಿಂದ ಎದ್ದು ಬಂದವರAತೆ ಹಳ್ಳಿ ಕಡೆಗೆ ಹೊರಟಿರುವುದು, ಪುನಃ ಜನರಿಗೆ ಹಣ ಹಂಚಲು ಹೊರಟಿದ್ದಾರೆ ಎನ್ನುವ ಸಂಶಯ ಕಾಡುತ್ತಿದೆ ಎಂದು ಅವರು ಲೇವಡಿ ಮಾಡಿದರು.ಜು.26 ರಂದು ಇಡಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ ಹಮ್ಮಿ ಕೊಂಡಿದೆ. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ವಿಚಾರಣೆ ಮಾಡುವುದನ್ನು ನಿಲ್ಲಿಸುವ ತನಕವೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಎಂ.ವಿ.ಅಂಜಿನಪ್ಪ, ಜಯಪ್ರಕಾಶ್, ಸಾಮಾಜಿಕ ಜಾಲತಾಣ ರಾಜ್ಯ ವಕ್ತಾರ ಎಲ್. ಮಂಜನಾಯ್ಕ್ ಇತರರಿದ್ದರು.