ಶಾಸಕರ ದೂರುಗಳಿಗೆ ಸಿದ್ದು ಮದ್ದಿನ ಗುದ್ದು

ಕೋಲಾರ,ಆ,೮-ಶಾಸಕರ ದೂರುಗಳನ್ನು ಆಲಿಸುವ ದೆಸೆಯಲ್ಲಿ ರಾಜ್ಯದ ಆಡಳಿತರೊಢ ಕಾಂಗ್ರೇಸ್ ಪಕ್ಷವು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ನೇತ್ರತ್ವದಲ್ಲಿ ಜಿಲ್ಲಾವಾರು ಸಭೆಗಳನ್ನು ನಡೆಸಿ ಅಸಮಾಧಾನ ಶಮನಗೊಳಿಸಿ, ಸಮಸ್ಯೆಗಳಿಗೆ ಸ್ಪಂದಿಸುವ ಮದ್ದು ನೀಡಲು ತೀರ್ಮಾನಿಸಿ ಸೋಮವಾರದಿಂದ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಕಾಂಗ್ರೇಸ್ ಮೂಲಗಳು ತಿಳಿಸಿವೆ
ಇತ್ತೀಚೆಗೆ ಕೆಲವು ಶಾಸಕರುಗಳು ಸಚಿವರ ಬಗ್ಗೆ ಅಸಮಾಧಾನ ವ್ಯಕ್ತ ಪಡೆಸಿ ರಾಜ್ಯದ ಕೆಲವಡೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿರುವುದು ಸುದ್ದಿಯಾಗಿತ್ತು, ನಂತರ ಹೈ ಕಮಾಂಡ್ ನಾಯಕರನ್ನು ದೆಹಲಿಗೆ ಕರೆಸಿ ಕೊಂಡು ಸಭೆ ನಡೆಸಿತ್ತು, ಮುಖ್ಯ ಮಂತ್ರಿಗಳು ಉಪಮುಖ್ಯ ಮಂತ್ರಿ ಅದಕ್ಕೂ ಮುನ್ನ ಶಾಸಕಾಂಗ ಸಭೆ ಕರೆದಿದ್ದರು.
ಇದೀಗ ಶಾಸಕರ ದೂರು ದುಮ್ಮಾನ ಆಲಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರದಿಂದ ಮೂರು ದಿನಗಳ ಕಾಲ ಜಿಲ್ಲಾವಾರು ಶಾಸಕರ ಸಭೆಗಳನ್ನು ನಡೆಸುತ್ತಿದ್ದಾರೆ.
ಅನುದಾನ ಬಿಡುಗಡೆ ಮನವಿಗೆ ಸ್ಪಂದಿಸಿದ ಸಚಿವರು ಅಸಮಾಧಾನಕ್ಕೆ ಮದ್ದಿನ ಕಾಯಕಲ್ಪಗಳನ್ನು ರೂಪಿಸುವಂತ ಕಾರ್ಯವನ್ನು ಮಾಡಲಿದ್ದಾರೆ. ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳನ್ನು ಮುಂದಿಟ್ಟು ಕೊಂಡು ಜಿಲ್ಲಾವಾರು ಸಭೆಗಳನ್ನು ಹಂತ,ಹಂತವಾಗಿ ನಡೆಸಲಾಗುತ್ತಿದೆ.
ಇತ್ತೀಚೆಗೆ ದೆಹಲಿಗೆ ತೆರಳಿ ಸಚಿವರು, ಶಾಸಕರು ವರಿಷ್ಟರ ಜೂತೆ ಸಭೆ ನಡೆಸಿ ತಮ್ಮ ಆಳಲು ತೋಡಿ ಕೊಂಡಿದ್ದರು, ಕಾಂಗ್ರೇಸ್ ಹೈಕಮಾಂಡ್ ಕೆಲ ಸಲಹೆ ಸೂಚನೆಗಳನ್ನು ನೀಡಿತ್ತು. ಅದರಂತೆ ಸಿ.ಎಂ. ಸಿದ್ದರಾಮಯ್ಯ , ಸಚಿವರು, ಶಾಸಕರ ಜೂತೆಗೆ ಸಭೆ ನಡೆಸಿ ಗೊಂದಲಗಳನ್ನು ಬಗೆಹರಿಸಿ, ಮನವಿಗಳಿಗೆ ಸ್ಪಂದಿಸುವ ಕೆಲಸಕ್ಕೆ ಮುಂದಾಗಲಿದ್ದಾರೆ. ಶಾಸಕಾಂಗ ಸಭೆಯಲ್ಲೂ ಮುಖ್ಯ ಮಂತ್ರಿ ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರನ್ನು ಭೇಟಿ ಮಾಡುವ ಭರವಸೆ ನೀಡಿದ್ದರು,
ಸೋಮವಾರ ನಡೆದ ಸಭೆಯಲ್ಲಿ ಧಾರವಾಡ, ಬಾಗಲಕೋಟೆ ಬಳ್ಳಾರಿ, ಯಾದಗಿರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಉಸ್ತುವಾರಿ ಸಚಿವರು, ಸಚಿವರು, ಹಾಗೂ ಶಾಸಕರೊಂದಿಗೆ ಸಣೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು, ಬೆಳಿಗ್ಗೆ ೧೧ ಗಂಟೆಗೆ ಪ್ರಾರಂಭವಾದ ಸಭೆಯು ರಾತ್ರಿ ೮ ಗಂಟೆಯವರೆಗೂ ಮುಂದುವರೆದಿತ್ತು ಎಂದು ಮೂಲಗಳು ತಿಳಿಸಿವೆ.