ಶಾಸಕರ ತವರಲ್ಲೆ ನೀರಿಗೆ ಆಹಾಕಾರ

ಸಿಂಧನೂರು.ಮಾ.೩೧- ಮಸ್ಕಿ ಶಾಸಕ ಬಸನಗೌಡ ತವರೂರು ತುರವಿಹಾಳ ಪಟ್ಟಣದಲ್ಲಿ ಶುದ್ದ ಕುಡಿಯುವ ನೀರಿಗೆ ಆಹಕಾರ ಎದ್ದಿದ್ದು, ಸ್ವಂತ ಪಟ್ಟಣ ಜನರು ಕುಡಿಯುವ ನೀರಿಗಾಗಿ ಹೆಣಗಾಡುತ್ತಿದ್ದರೆ, ಇನ್ನೂ ಕ್ಷೇತ್ರದ ಪರಿಸ್ಥಿತಿ ಏನಾಗಿರಬಹುದು.ಅಲ್ಲಿನ ನಿವಾಸಿಗಳು ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಂ ಅಂತಿದ್ದಾರೆ.
ನಮ್ಮೂರಿನವರು ಶಾಸಕರಾಗಿ ಗೆದ್ದರೆ, ಬೆಂಗಳೂರಿನ ವಿಧಾನ ಸೌದದಲ್ಲಿ ತುರವಿಹಾಳ ಪಟ್ಟಣದ ಹೆಸರು ರಾಜ್ಯ ಮಟ್ಟದಲ್ಲಿ ಗುರುತಿಸುತ್ತಾರೆಂಬ ಆಶೆಯೊಂದಿಗೆ ಪಟ್ಟಣದ ಪ್ರತಿ ನಿವಾಸಿ ಜಾತಿ, ಧರ್ಮ, ಲೆಕ್ಕಿಸದೆ ಹಗಲು-ರಾತ್ರಿ ಎನ್ನದೇ ಮತಗಳನ್ನು ಹಾಕಿ ಇಡೀ ರಾಜ್ಯ ಒಮ್ಮೆ ತಿರುಗಿ ನೋಡುವಂತೆ ಮತಗಳನ್ನು ಕೊಟ್ಟು ಪ್ರಚಂಡ ಬಹುಮತದಿಂದ ಗೆಲ್ಲಿಸಿದರು ಆದರೆ ಇಂದು ಆ ಜನ ಇಟ್ಟುಕೊಂಡ ಭರವಸೆಗಳು ಪಕ್ಕದಲ್ಲಿರಲಿ ಶುದ್ದ ಕುಡಿಯುವ ನೀರು ಕೊಡಕ್ಕಾಗದೇ ಇರುವಂತಹ ದುಸ್ಥಿತಿ ಗೆದ್ದಂತಹ ಶಾಸಕರಿಗೆ ಯಾಕೆ ಬಂದೊದಗಿತು ತಿಳಿಯದಾಗಿದೆ.’ ಓಡಾಡಿ ಚುನಾವಣೆ ಮಾಡಿ ಗೆಲ್ಲಿಸಿದ ಪ್ರತಿಯೊಬ್ಬರೂ ಈ ಕಡೆ ಉಗಳಕ್ಕೂ ಆಗದೇ ಆ ಕಡೆ ನುಂಗಕ್ಕೂ ಆಗದೇ ಯಾರಿಗೆ ಹೇಳೊಣ… ನಮ್ಮ ಪ್ರಾಬ್ಲಂ ಅಂತಿದ್ದಾರೆ’ ಮಹಿಳೆಯರಂತೂ ಶಾಪ ಹಾಕದ ದಿನವಿಲ್ಲ. ಹತ್ತು ದಿನಗಳ ಗಳಿಗೊಮ್ಮೆ ನೀರು ಬಿಡುತ್ತಿದ್ದು ಇದು ಸಹಿಸಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುರುಡು ಗಣ್ಣಿಗಿಂತ ಮೆಳ್ಳೆಗಣ್ಣು ವಾಸಿ : ಹಾಟ್ರಿಕ್ ಗೆಲುವು ಸಾಧಿಸಿ ಇನ್ನೂ ನನಗೆ ಸರಿ ಸಾಟಿ ಯಾರು ಇಲ್ಲ ಎಂದುಕೊಂಡು ಪ್ರಜೆಗಳ ಮತಗಳಿಗೆ ಮನ್ನಣೆ ಕೊಡದೆ ಗೆದ್ದ ನಂತರವೂ ಯಾವುದೋ ದುರಾಸೆನೋ ಏನು ಗೊತ್ತಿಲ್ಲ ಒಟ್ಟಾರೆ ಪಕ್ಷಾಂತರಂತೂ ಮಾಡಿದಕ್ಕಾಗಿ ಮತದಾರ ಪ್ರಭುಗಳು ಕುರುಡಗಣ್ಣಿಗಿಂತ ಮೆಳ್ಳೆಗಣ್ಣು ಉತ್ತಮ ಎಂದು ತುರವಿಹಾಳ ಬಸನಗೌಡ ರನ್ನು ಗೆಲ್ಲಿಸಿದರೂ ಕೂಡ ಯಾವುದೇ ಬದಲಾವಣೆ ಕಾಣದಾಗಿದೆ.
ಪಟ್ಟಣದ ಪಕ್ಕದಲ್ಲಿ ನೂರಾರು ಎಕರೆ ಕೆರೆ ಇದ್ದೂ ಇಲ್ಲದಂತಾಗಿದೆ.ಸಿಂಧನೂರು ನಗರಕ್ಕೆ ನೀರು ಸರಬರಾಜು ಮಾಡುವ ಕೆರೆ ,ತುರವಿಹಾಳ ಪಟ್ಟಣದ ಕೊರತೆ ನೀಗಿಸಲು ಆಗಲ್ವಾ ….? ಈ ಪಟ್ಟಣಕ್ಕೆ ನೀರಿಲ್ಲದ ದುಸ್ತಿತಿ ಬಂದಿದೆ ಇದಕ್ಕೆ ಅಧಿಕಾರಿ ಗಳ ಬೇಜವಬ್ದಾರಿನೋ ಅಥವಾ ಶಾಸಕರ ನಿಷ್ಕಾಳಜಿ ಗೊತ್ತಿಲ್ಲ ಸಮಸ್ಯೆಯಂತೂ ಜೀವಂತ.ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ಎಂದು ಮಹಿಳೆಯರು ಪಟ್ಟಣ ಪಂಚಾಯತಿ ಮುತ್ತಿಗೆ ಹಾಕಿದ ಘಟನೆ ಜರುಗಿದೆ ಆದರೆ ಸಮಸ್ಯೆ ಇನ್ನೂ ಜೀವಂತ.ಇಷ್ಟೆಲ್ಲಾ ನೀರಿನ ಸಮಸ್ಯೆ ತಾಂಡವಾಡುತ್ತಿದ್ದರೂ ಶಾಸಕರ್ಯಾಕೆ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ ಮೊನ್ನೆ ತಾನೆ ಚುನಾವಣೆ ಮುಗಿದಿದೆ ಇನ್ನೂ ಯಾಕೆ ಅವಸರ ಅಂತಿದ್ದಾರಾ ಏನು ಗೊತ್ತಿಲ್ಲ ಸಮಸ್ಯೆ ಮಾತ್ರ ಜೀವಂತ.
ಡೆಂಗ್ಯೂ, ಕಾಲರಾ, ಟೈಪಾಯಿಡ್ ರೋಗಗಳಿಗೆ ಆಹ್ವಾನ : ಪಟ್ಟಣದಲ್ಲಿನ ಸದ್ಯದ ನೀರು ಕುಡಿಯಲು ಯೋಗ್ಯವಲ್ಲ ಎಂದು ಸರ್ಕಾರಿ ವೈದ್ಯರು ತಿಳಿಸಿದ್ದಾರೆ.ಈಗಾಗಲೇ ಹಲವಾರು ಡೆಂಗ್ಯೂ, ಕಾಲರಾ ಪ್ರಕರಣ ಗಳು ತಪಾಸಣೆಗೊಳಪಡಿಸಿದಾಗ ಬೆಳಕಿಗೆ ಬಂದಿವೆ ಇಷ್ಟಾದರೂ ಶಾಸಕ ಬಸನಗೌಡ ತುರವಿಹಾಳ ಸಮಸ್ಯೆ ಪರಿಹರಿಸುತ್ತಿಲ್ಲ ಎಂಬುವುದು ಸಾರ್ವಜನಿಕರ ಪ್ರಶ್ನೆ.
ಕ್ಷೇತ್ರದ ಚಿಕ್ಕಬೇರ್ಗಿ, ಬುಕ್ಕನಹಟ್ಟಿ, ಗುಂಡ, ಬಳಗಾನೂರ, ಮಸ್ಕಿ ರತ್ನಪುರ, ಬಪ್ಪೂರು, ಹತ್ತಿಗುಡ್ಡ ಸೇರಿದಂತೆ ಕ್ಷೇತ್ರದ ಬಾಗಶ: ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆದೂರಿದೆ ಹಾಗೂ ತುರವಿಹಾಳ ಪಟ್ಟಣದಲ್ಲಿ ಮುಖ್ಯ ರಸ್ತೆಯಿಂದ ಪೋಲಿಸ್ ಠಾಣೆ ವರೆಗೆ ಜನ ಸಂಪೂರ್ಣ ದೂಳು ತಾಳಲಾರದೆ ಕಣ್ಣು, ಮೂಗು, ಬಾಯಿ ಮುಚ್ಚಿಕೊಂಡು ಓಡಾಡಿಕೊಂಡು ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.