ಶಾಸಕರ ಟೀಕೆಗೆ ಕೆಪಿಸಿಸಿ ಸದಸ್ಯ ಬಾಬು ಆಕ್ಷೇಪ

ಕೋಲಾರ,ಜೂ,೯- ದ.ಸಂ.ಸ ಮುಖಂಡ ಹೊವಳ್ಳಿ ಪ್ರಕಾಶ್ ತಮ್ಮ ಆರ್ಹತೆಗೂ ಮೀರಿ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಕುರಿತು ಹಗುರವಾಗಿ ಟೀಕಿಸಿರುವುದು ಸಮಂಜಸವಲ್ಲ. ಇದೇ ರೀತಿ ಟೀಕೆಗಳನ್ನು ಮಾಡಿದಲ್ಲಿ ಮುಂದಿನ ಪರಿಣಾಮ ಸರಿ ಇರುವುದಿಲ್ಲ ಉಗ್ರ ಪ್ರತಿಭಟನೆಯನ್ನು ಮಾಡ ಬೇಕಾಗುತ್ತದೆ ಎಂದು ಕೆ.ಪಿ.ಸಿ.ಸಿ. ಸದಸ್ಯ ಖಾದ್ರಿಪು ಬಾಬು ಎಚ್ಚರಿಕೆ ನೀಡಿದರು,
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಜೆ.ಡಿ.ಎಸ್. ಬಳಿ ಪ್ಯಾಕೇಜ್ ಪಡೆದು ಕೊಂಡು ಬಂದು ಪತ್ರಿಕಾ ಗೋಷ್ಠಿಯಲ್ಲಿ ತಪ್ಪು ಹೇಳಿಕೆಗಳನ್ನು ನೀಡಿ ಸಾರ್ವಜನಿಕರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿರುವ ಹೊಹಳ್ಳಿ ಪ್ರಕಾಶ್ ಅವರಿಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ ? ಕಾಂಗ್ರೇಸ್ ಪಕ್ಷದ ಕದ ಏಕೆ ತಟ್ಟುತ್ತಿದ್ದಾರೆ ? ಎಂ.ಎಲ್.ಸಿ. ಅನಿಲ್ ಕುಮಾರ್ ಯಾರ ಮನೆ ಹಾಳು ಮಾಡಿದ್ದಾರೆ ?ಯಾರ ಬಳಿಯಾದರೂ ಕೈ ಚಾಚಿದ್ದರೆ ದಾಖಲೆ ಸಮೇತ ರುಜುವಾತು ಪಡೆಸಲಿ ಎಂದು ಸವಾಲ್ ಹಾಕಿದರು,
ಅನಿಲ್ ಕುಮಾರ್ ಅವರು ಕತ್ತೆ ಕಾಯಲಿಕ್ಕೆ ಅಲ್ಲ ಜನರನ್ನು ಕಾಯಲಿಕ್ಕೆ, ಜನರ ಸೇವೆ ಮಾಡಲಿಕ್ಕೆ ಎಂ.ಎಲ್.ಸಿ. ಅಗಿದ್ದಾರೆ ಎಂದ ಅವರು ಅನಿಲ್ ಕುಮಾರ್ ಹಿಂಬಾಗಿಲ ಮೂಲಕ ಪ್ರವೇಶ ಪಡೆದಿರುವುದು ಯಾವ ಕ್ಷೇತ್ರದಿಂದ ಎಂಬುವುದು ಹೇಳಲಿ. ಅವರು ವಿಧಾನ ಪರಿಷತ್‌ಗೆ ಯಾವ ಕ್ಷೇತ್ರದಿಂದ ಹೇಗೆ ಪ್ರವೇಶಿಸಿದ್ದಾರೆ ಎಂಬುವುದನ್ನು ಸಮರ್ಪಕವಾಗಿ ಅರಿಯದೆ, ತಮ್ಮ ಆರ್ಹತೆ ಮೀರಿ ಜನಪ್ರತಿನಿಧಿಗಳನ್ನು ಅನಾರೋಗ್ಯಕರವಾಗಿ ಟೀಕಿಸಿರುವುದು ಅವರ ಯೋಗ್ಯತೆಯ ಅಳತೆಗೋಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಅನಿಲ್ ಕುಮಾರ್ ಸ್ಥಳೀಯ ಸಂಸ್ಥೆಗಳಿಂದ ಮತಪಡೆದು ಚುನಾವಣೆಯಲ್ಲಿ ಆಯ್ಕೆಯಾಗಿ ಬಂದವರೇ ಹೊರತಾಗಿ ಯಾವೂದೇ ರೀತಿ ನಾಮಕರಣ ಸದಸ್ಯರಲ್ಲ ಎಂದು ಸ್ವಷ್ಟಪಡಿಸಿದ ಅವರು ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಅದುನೀಕರಣಕ್ಕೆ ೫೦ ಕೋಟಿ ರೂ, ರಸ್ತೆಗಳ ಅಭಿವೃದ್ದಿಗೆ ೨೫ ಕೋಟಿ ರೂ ಸೇರಿದಂತೆ ೭೫ ಕೋಟಿ ರೂ ಸರ್ಕಾರದಿಂದ ಅನುದಾನವನ್ನು ತಂದಿದ್ದು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗೆ ಮುಂದಾಗಿದೆ ಚುನಾವಣೆಗಳ ನೀತಿ ಸಂಹಿತೆಯಿಂದಾಗಿ ವಿಳಂಬವಾಗಿದೆ ಎಂದರು
ಬಿಜೆಪಿ ಸರ್ಕಾರದಲ್ಲಿ ಇದ್ದಂತಹ ಅಧಿಕಾರಿಗಳೇ ಕಾಂಗ್ರೇಸ್ ಸರ್ಕಾರದಲ್ಲಿ ಮುಂದುವರೆಯುತ್ತಿದ್ದಾರೆ ಹೊರತು ಯಾರನ್ನು ವರ್ಗಾವಣೆ ಮಾಡಿಲ್ಲ. ಸಹಕವಾದ ಕೆಲವು ಇಲಾಖೆಗಳಲ್ಲಿ ಇತರೆ ಕಾರಣಗಳಿಗೆ ವರ್ಗಾವಣೆ ಅಗಿರ ಬಹುದು ಅದರೆ ಶಾಸಕರಾಗಲಿ, ವಿಧಾನಪರಿಷತ್ ಸದಸ್ಯರಿರೂ ವರ್ಗಾವಣೆಗಳಿಗೂ ಸಂಬಂಧವಿಲ್ಲ. ಎಲ್ಲಾ ವರ್ಗದ ಅಧಿಕಾರಿಗಳು ಇದ್ದಾರೆ.ಯಾವೂದೇ ರೀತಿ ಜಾತಿ ತಾರತಮ್ಯ ಮಾಡುತ್ತಿಲ್ಲ ಎಲ್ಲವೂ ಅಧಾರ ರಹಿತವಾದ ಕಪೋಕಲ್ಪಿತ ಅರೋಪಗಳಾಗಿವೆ ಎಂದು ಪ್ರತಿಪಾದಿಸಿದರು,
ಶಾಸಕ ಕೊತ್ತೂರು ಮಂಜುನಾಥ್ ಅವರು ಕೇವಲ ೨೦ ದಿನಗಳಲ್ಲಿ ಚುನಾವಣೆಯನ್ನು ಎದುರಿಸಿ ಆಯ್ಕೆಯಾದವರು, ವಿಧಾನ ಪರಿಷತ್ ಶಿಕ್ಷಕರ ಚುನಾವಣೆಯಲ್ಲಿ ಎಲ್ಲಾ ಶಾಸಕರು ಕೆಲಸ ಮಾಡಿದ ಹಿನ್ನಲೆಯಲ್ಲಿ ಕಾಂಗ್ರೇಸ್ ಬೆಂಬಲಿತ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಚುನಾವಣೆಗಿಂತ ಹೆಚ್ಚಿನ ಮತಗಳು ಬಂದಿದೆ ಅದರೆ ನಮ್ಮಲ್ಲಿನ ಅಂತರಿಕ ಭಿನ್ನಮತಗಳಿಂದಾಗಿ ಸೋಲು ಕಾಣುವಂತಾಗಿದೆ.ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವು ಬಲಿಷ್ಟವಾಗಿದೆ. ಹಿಂದೆ ಕಾಂಗ್ರೇಸ್ ಭದ್ರಕೋಟೆಯಾಗಿದ್ದ ಜಿಲ್ಲೆ ನಮ್ಮದಾಗಿದೆ ಎಂದು ತಿಳಿಸಿದರು.