ಶಾಸಕರ ಅವಧಿಯಲ್ಲಿ ನೂತನ ಕಾಮಗಾರಿಗಳೇನು?

ಮಾನ್ವಿ,ಏ.೨೬- ಕಳೆದ ಐದು ವರ್ಷದ ಅವಧಿಯಲ್ಲಿ ಶಾಸಕ ವೆಂಕಟಪ್ಪ ನಾಯಕ ಕ್ಷೇತ್ರಕ್ಕೆ ನೂತನವಾಗಿ ಯಾವ ಕಾಮಗಾರಿಯನ್ನು ತಂದಿದ್ದಾರೆ ಎನ್ನುವುದನ್ನು ದಾಖಲೆ ತೋರಿಸುವುದಾದರೆ ನಾನು ಚರ್ಚೆಗೆ ಸಿದ್ದ ನಿಮಗೆ ಯೋಗ್ಯತೆ ಇದ್ದಲ್ಲಿ ಚರ್ಚೆಗೆ ಬರಬಹುದು ಎಂದು ಎಐಸಿಸಿ ಕಾರ್ಯದರ್ಶಿ ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಬೋಸರಾಜ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತಾನಾಡಿದ ಅವರು ಮಾನವಿ ಸಿರವಾರ ತಾಲೂಕಿನ ಶಾಲೆ,ಕಾಲೇಜು, ವಸತಿ ನಿಲಯ, ಕ್ರೀಡಾಂಗಣ, ಕುಡಿಯುವ ನೀರು, ಕಾಲುವೆ ನೀರು, ಬಸ್ಸು ಡಿಪೋ, ರಬ್ಬಣಕಲ್ ಕೆರೆ, ತಾಲೂಕ ಕ್ರೀಡಾಂಗಣ, ಸೇರಿದಂತೆ ಅನೇಕ ಕಾಮಗಾರಿಗಳು ನಮ್ಮ ಅವಧಿಯಲ್ಲಿ ಬಂದಿರುವ ಕೆಲಸಗಳಾಗಿವೆ ಅವುಗಳನ್ನು ಉದ್ಘಾಟನೆ ಮಾಡುವುದಕ್ಕೆ ೪೦% ಪಡೆಯುವ ಶಾಸಕರಿಂದ ಕ್ಷೇತ್ರದ ಅಭಿವೃದ್ಧಿ ಮಾತ್ರ ಮರಿಚಿಕೆಯಾಗಿದೆ ಆದರೂ ನಮ್ಮ ಯೋಗ್ಯತೆ ಪ್ರಶ್ನೆ ಮಾಡುವುದಕ್ಕೆ ನಿಮಗೆ ಯೋಗ್ಯತೆ ಇಲ್ಲವಾಗಿದೆ ಎಂದರು..
ಪ್ರಮುಖವಾಗಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದು ನಾವು ಇದಕ್ಕೆ ಸಂಬಂಧಿಸಿದಂತೆ ರೆವಿನ್ಯೂ ಇಲಾಖೆಗೆ ೭೦ ಲಕ್ಷ ಹಣವನ್ನು ನೀಡಿ ನಂದಿಹಾಳ ಹತ್ತಿರದಲ್ಲಿನ ೮ ಎಕರೆ ಜಾಗವನ್ನು ನೀರಾವರಿ ಇಲಾಖೆಗೆ ನೀಡಿ ನೀರಾವರಿ ಇಲಾಖೆಯ ನಾಲ್ಕು ಎಕರೆ ಜಾಗವನ್ನು ಪಡೆದವರು ನಾವು ಇದರ ಮಾಹಿತಿ ಇಲ್ಲದ ಶಾಸಕ ಅಕ್ರಮ ಮರಳು ಸಾಗಣೆಯಲ್ಲಿ ಹಣ ಪಡೆಯುವುದರಲ್ಲಿ ಬಿಜಿಯಾಗಿದ್ದಾರೆ ಎಂದು ಆರೋಪಿಸಿದರು ಕಳೆದ ಚುನಾವಣೆಯಲ್ಲಿ ಹಾಲು ಕೊಡ್ತೀರಾ ವಿಷ ಕೊಡ್ತೀರಾ ಎಂದು ಕ್ಷೇತ್ರದ ಜನರಿಗೆ ವಿಷವನ್ನು ನೀಡಿ ತಾವು ಹಾಲು ಕುಡಿದು ತಣ್ಣಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಕಪೂರ್ ಸಾಬ್, ರಾಜಾ ವಸಂತ ನಾಯಕ, ವೈ ಶರಣಪ್ಪ ನಾಯಕ ಕೆ.ಗುಡದಿನ್ನಿ, ರಫಿ ಸಾಹುಕಾರ, ಬಾಲಸ್ವಾಮಿ ಕೊಡ್ಲಿ, ಬಸವರಾಜ್ ನಾಡಗೌಡ ಪೋತ್ನಾಳ, ಸಬ್ಜಲ್ಲಿ ಸಾಬ್ ಇದ್ದರು.