ಶಾಸಕರ ಅಭಿವೃದ್ದಿ ಕಾರ್ಯ ಸಹಿಸಲಾಗದೆ ಸುಳ್ಳು ಆಡಿಯೋ ಬಿಡುಗಡೆ

ಚುನಾವಣೆಯಲ್ಲಿ ಶಿವರಾಜ ಪಾಟೀಲ್ ಗೆಲುವು ಖಚಿತ – ಗದ್ವಾಲ್ ವೀರೇಶ್ ರೆಡ್ಡಿ
ರಾಯಚೂರು,ಏ.೪- ರಾಯಚೂರು ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಹಾಗೂ ಅಭಿವೃದ್ದಿ ಕಾರ್ಯಗಳನ್ನು ನೋಡಿ ಸಹಿಸಲಾಗದೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ವಿರುದ್ಧ ಷಡ್ಯಂತ್ರ ಮಾಡಿ ವಿಭಿನ್ನ ರೀತಿಯಲ್ಲಿ ಆಡಿಯೋ ಬಿಡುಗಡೆಯಿಂದ ಅವರ ವರ್ಚಸ್ಸನ್ನು ಕಡಿಮೆ ಮಾಡಲು ಆಗುವುದಿಲ್ಲ ಎಂದು ಬಿಜೆಪಿ ಮುಖಂಡ ಗದ್ವಾಲ್ ವೀರೇಶ್ ರೆಡ್ಡಿ ಹೇಳಿದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರ ಬಗ್ಗೆ ಬಂದಿರುವ ಆಡಿಯೋ ಇವೆಲ್ಲ ಸುಳ್ಳು ಸುದ್ದಿಯಾಗಿದೆ.ಅವರ ಅಭಿವೃದ್ದಿ ಕಾರ್ಯಗಳನ್ನು ಸಹಿಸಲಾಗದೆ ಈ ರೀತಿ ಸುಳ್ಳು ಆಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.ನಗರ ಜನರು ಯಾರು ಕೂಡ ನಂಬಬಾರದು ಎಂದರು.
ಶಾಸಕರು ಮೂಲತಾ ವೃತ್ತಿಯಲ್ಲಿ ವೈದ್ಯರಾಗಿದ್ದು, ಸಾಕಷ್ಟು ಜನರ ಜೀವ ಹುಳೀಸುವ ಕಾರ್ಯ ಅಭಿವೃದ್ಧಿ ಮಾಡಿದ್ದಾರೆ ಇಂದು ಅವರ ಕಾರ್ಯ ವೈಖರಿ ಸಹಿಸದೆ ಅಪಪ್ರಚಾರ ಮಾಡುತ್ತಿದ್ದಾರೆ.ಇದೆಕ್ಕೆ ಯಾರು ಕಿವಿ ಕೊಡಬಾರದು ಎಂದ ಅವರು ಡಾ.ಶಿವರಾಜ ಪಾಟೀಲ್ ಅವರು ಶಾಸಕರಾದ ನಂತರ ರಾಯಚೂರು ನಗರದಲ್ಲಿ ೧೪ ಹಳ್ಳಿಗಳ ಕೆರೆ ತುಂಬುವ ಯೋಜನೆ ಮಾಡಿ ನಗರದಲ್ಲಿ ಒಳಚರಂಡಿ ನಿರ್ಮಾಣ ಮಾಡಿದ್ದಾರೆ.ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಸ್ಲಂ ನಿವಾಸಿಗಳಿಗೆ ೨೪೦೦ ಮನೆಗಳ ನಿರ್ಮಾಣ ಮಾಡಿದ್ದಾರೆ.ರಾಜೀವ್ ಗಾಂಧಿ ವಸತಿ ನಿಗಮದಿಂದ ೨೭೦೦ ಫಲಾನುಭವಿಗಳಿಗೆ ಉ+೩ ಮನೆಗಳ ನಿರ್ಮಾಣ ಮಾಡಿದ್ದಾರೆ.
ನಗರದಲ್ಲಿ ವಾಸಿಸುತ್ತಿರುವ ಸ್ಲಂ ನಿವಾಸಿಗಳಿಗೆ ೧೦೦೦೦ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ೨೧೯ ಕೋಟಿ ರೂ ರಾಯಚೂರು ನಗರದಲ್ಲಿ ವಿಮಾನ ನಿಲ್ದಾಣಕ್ಕೆ ಅನುದಾನ ಒದಗಿಸಲಾಗಿದೆ.
೧೬೪೦ ಕೋಟಿ ರೂ. ೪೫ ಕಿ.ಮೀ ಬೈಪಾಸ್ ರಸ್ತೆ ನಿರ್ಮಾಣ,ಡಿಜಿಟಲ್ ಗ್ರಂಥಾಲಯ ಅಂಗನವಾಡಿ ಕೇಂದ್ರ,ಮಕ್ಕಳ ಆಸ್ಪತ್ರೆ ಹಾಗೂ
೩೦೦ ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣ, ಮಾದರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ ಸೇರಿ ಇನ್ನಿತರ ಅಭಿವೃದ್ದಿ ಕಾರ್ಯಗಳನ್ನು ಸಹಿಸಲಾಗದೆ ಇಲ್ಲ ಸಲ್ಲದ ಅಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಇವೆಲ್ಲವುಗಳನ್ನು ನಂಬಬಾರದು.ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ಶಿವರಾಜ ಪಾಟೀಲ್ ಅವರ ಗೆಲುವು ಖಚಿತ ಎಂದು
ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.