ಶಾಸಕರ ಅನುದಾನ ಶಿಕ್ಷಣಕ್ಕಾಗಿ ಮೀಸಲೀಡಲು ತೀರ್ಮಾನ; ಯಶವಂತರಾಯಗೌಡ ಪಾಟೀಲ

ಇಂಡಿ:ಜ.10: ಪುಸ್ತಕಗಳನ್ನು ಯಾರೂ ಪ್ರೀತಿಸುತ್ತಾರೆಯೋ ಅವರು ಪುಸ್ತಕದ ಪೂಜಾರಿಗಳಾಗುತ್ತಾರೆ ಎಂಬ ಮಾತು ಸರ್ವವಿಧಿತವಾಗಿದೆ. ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯೆ ಹೀಗಾಗಿ ಶಾಸಕರ ನಿಧಿಯನ್ನು ಸಮುದಾಯ ಭವನಗಳಿಗೆ ಬದಲಾಗಿ ಶಿಕ್ಷಣಕ್ಕೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದ 2ಕೋಟಿ ಶಾಸಕರ ನಿಧಿಯಲ್ಲಿ 70ಲಕ್ಷಕ್ಕೂ ಅಧಿಕ ಶಿಕ್ಷಣ ಕ್ಷೇತ್ರದ ಪ್ರಗತಿಗೆ ನೀಡಿರುವೆ. ನನ್ನ ಅವಧಿಯಲ್ಲಿ ಪ್ರತಿ ಸಮಾಜಗಳಿಗೆ ಸಮುದಾಯ ಭವಗಳನ್ನು ಕಟ್ಟಿಸಲಾಗಿದೆ ಇಲ್ಲಿ ನಡೆಯುವ ಚಟುವಟಿಕೆಗಳು ಆರೋಗ್ಯಕರವಾಗಿರಬೇಕು. ಸಮುದಾಯ ಭವನಗಳಲ್ಲಿ ನಿಯತಕಾಲಿಕೆಗಳು,ಮ್ಯಾಗಝಿಜಗಳು, ಸಾಹಿತಿಗಳ ,ಕವಿಗಳ ಪುಸ್ತಕಗಳನ್ನು ಇಡಬೇಕು .ಪುಸ್ತಕ
ಗಳು ಜ್ಞಾನ ನೀಡುವ ವಾಗ್ದೇವಿಯ ಭಂಡಾರವಿದ್ದಂತೆ ಹಿರೇಮಸಳಿ ನೂತನ ಗ್ರಂಥಾಲಯಕ್ಕೆ 2ಲಕ್ಷ ರೂ ಮೊತ್ತದ ಗುಣಮಟ್ಟದ ಪುಸ್ತಕ ಖರೀದಿಸಿ ಕೊಡುವುದಾಗಿ ಭರವಸೆ ನೀಡಿದರು.
ಇಂಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲಾ ರೀತಿಯಿಂದ ಅಭಿವೃದ್ದಿ ಸಾಧಿಸಿದ್ದೇನೆ. ಅನೇಕ ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಸ್ತಿ ಪಂಜರದಂತೆ ಕಂಗೋಳಿಸುತ್ತಿದ್ದ ಶ್ರೀಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಸಿಂದಗಿ- ಇಂಡಿ ಭಾಗದ ರೈತರ ಆಸ್ತಿಯನ್ನಾಗಿ ಮಾಡಿದ್ದೇನೆ. ಲಿಂಬೆ ಬೆಳೆಯುವ ರೈತರ ಹಿತವನ್ನು ಗಮನಿಸಿ ರಾಜ್ಯಮಟ್ಟದಲ್ಲಿ ಸ್ಥಾಪಿಸಬೇಕಾದ ಲಿಂಬೆ ಅಭಿವೃದ್ದಿ ಮಂಡಳಿಸ್ಥಾಪಿಸಿರುವೆ ,ಮುಂದಿನ ದಿನಗಳಲ್ಲಿ ರೈತರ ಬಾಳಿಗೆ ವರಧಾನವಾಗಲಿದೆ. ಗ್ರಾಮಸ್ಥರ ಬಹುದಿನಗಳ ಬೇಡಿಯೊಂದು ಹಿರೇಮಸಳಿ ಹಳ್ಳದ ಸೇತುವೆ ನಿರ್ಮಿಸಲು ಪ್ರಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ಮಾಜಿ ಶಾಸಕ ಆರ್.ಆರ್ ಕಲ್ಲೂರ ಮಾತನಾಡಿ ನಾನು ಶಾಸಕನಾದ ಮೇಲೆ ಅಂದಿನ ಶಾಸಕರ ಅನುಧಾನ ಕಡಿಮೆ ಇರುವದರಿಂದ ಆದಷ್ಟು ತಾಲೂಕಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿರುವೆ . ಇಂದು ಶಾಸಕ ಯಶವಂತರಾಯಗೌಡ ಪಾಟೀಲ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ದಿ ಜನಸಮುದಾಯದ ಬಗ್ಗೆ ಕಳಕಳಿ ಇದ್ದರೆ ಜನತೆ ಕೈಬೀಡುವದಿಲ್ಲಾ ಇವರಿಂದ ಮುಂದಿನ ದಿನಗಳಲ್ಲಿ ಇನಷ್ಟು ಅಭಿವೃದ್ದಿಯಾಗಲಿ ಎಂದರು.ಖ್ಯಾತ ವೈದ್ಯ ಡಾ. ಎಂ.ಎಸ್ ಕಲ್ಲೂರ ಯಾವುದೇ ವ್ಯಕ್ತಿ ಎಷ್ಟೇ ದೊಡ್ಡವರಿದ್ದರೂ ತನ್ನ ಜಿಲ್ಲೆ.ತಾಲೂಕು ತನ್ನ ಗ್ರಾಮದ ಬಗ್ಗೆ ಅಭಿಮಾನ ಇದ್ದೆ ಇರುತ್ತದೆ. ಗ್ರಾಮದ ಭಿವೃದ್ದಿಗೆ ನನ್ನ ಕೈಲಾದಮಟ್ಟಿಗೆ ಸಹಾಯ ಸಹಕಾರ ಮಾಡುವದಾಗಿ ಭರವೆಸೆ ನೀಡಿದರು. ಶರಣಯ್ಯಾ ಹಿರೇಮಠ ದಿವ್ಯಸಾನಿಧ್ಯವಹಿಸಿದರು.
ಸಿದ್ರಾಯ ಭಾವಿಕಟ್ಟಿ, ಎಸ್ .ಬಿ ಕಲ್ಲೂರ, ಪುಂಡಲೀಕ ಕಪಾಲಿ, ಎಂ.ಆಯ್ ಬಗಲಿ, ಪೀರು ಮನವಿ, ಮಹಾದೇಪ್ಪ ಏವೂರ, ಪರಶುರಾಮ ಭಾಸಗಿ, ತಾಲೂಕಾ ಪಶು ವೈಧಾಧಿಕಾರಿ ಸಿ ಬಿ ಕುಂಬಾರ, ಸೋಮಶೇಖರ ಬ್ಯಾಳಿ , ಐ.ಎಸ್ ಮಾಶಾಳ, ಪ್ರವೀಣ ಮನಮಿ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸಿದ್ರಾಮ ಸಿನಖೇಡ ಉಪಸ್ಥಿತರಿದ್ದರು.