ಶಾಸಕರೇ ತಾಕತ್ತಿದ್ದರೆ ಒಂದು ಕೆರೆ ನಿಮಿ೯ಸಿ


ಸಂಜೆವಾಣಿ ವಾರ್ತೆ
ಯಲಬುರ್ಗಾ, ಮೇ.31:   ಯಲಬುರ್ಗಾ ಶಾಸಕ ಬಸವರಾಜ್ ರಾಯರೆಡ್ಡಿ ಅವರು ಚುನಾವಣೆ ಸಂದಭ೯ ದಲ್ಲಿ ತಾವು ಆಯ್ಕ ಯಾದರೆ ಕ್ಷೇತ್ರದಲ್ಲಿ  ೬೦ ಹೊಸ ಕೆರೆಗಳನ್ನು ನಿಮಿ೯ಸಲಾಗುವುದು  ಎಂದು ಭರವಸೆ ನೀಡಿದ್ದರು. ಈಗ ಗೆದ್ದಿದ್ದಾರೆ ಅವರಿಗೆ ತಾಕತ್ತಿದ್ದರೆ ೧ ಕೆರೆ ನಿಮಿ೯ಸಲಿ ಎಂದು ಜೆಡಿಎಸ್ ಪರಾಜಿತ  ಅಭ್ಯಥಿ೯ ಮಲ್ಲನಗೌಡ ಕೊನನಗೌಡ ಸವಾಲು ಹಾಕಿದ್ದಾರೆ. ಅವರು ಸಂಜೆವಾಣಿ ಜೊತೆ  ಮಾತನಾಡಿ, ಅಸೆಂಬ್ಲಿ ಚುನಾವಣೆಯಲ್ಲಿ ನಾನಾ ಪಕ್ಷಗಳು ಕಸರತ್ತು ನಡೆಸಿ ಚುನಾವಣೆ ಯಶಸ್ವಿ ಯಾಗಿಡೆ.  ತಾವು ಸಹ ನಿರಂತರ ಪ್ರಯತ್ನ ನಡೆಸಲಾಗಿತ್ತು. ಆದರೆ  ಜನರು ಗ್ಯಾರಂಟಿ ಕಾಡಿ೯ಗೆ ಮಾರು ಹೋಗಿ ಕಾಂಗ್ರೆಸ್ ಗೆ ಗೆಲ್ಲಿಸಿದ್ದಾರೆ. ಬೇವೂರು ಭಾಗದಲ್ಲಿ ಮಾಜಿ ಸಚಿವ ಸವದೀ ಯವರ ಪ್ರಭಾವಕ್ಕೆ ಒಳಗಾಗಿ ನಮಗೆ ಬರುವ ಬರುವ ಮತಗಳು ಕಾಂಗ್ರೆಸ್ ಗೆ ಹೋದವು. ಬಿಜೆಪಿ ಯವರು ಏನೇ ತಿಪ್ಪರಲಾಗ ಹಾಕಿದರೂ ಕೆಲಸ  ಆಗಿಲ್ಲ. ಅದೇನಿದ್ದರೂ ತಾವು ಸೋಲಿಗೆ ಅಳುಕದೆ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಚುರುಕುಗೊಳಿಸಲು ಪ್ರಯತ್ನಿಸಲಾಗುವುದು ಎಂದು ಕೊನನಗೌಡರು ತಿಳಿಸಿದರು.

One attachment • Scanned by Gmail