ಶಾಸಕರೇ ಇತ್ತ ಗಮನಿಸಿ, ಕೂಡ್ಲಿಗಿ ಆಸ್ಪತ್ರೆಲಿಮುರಿದ ಬಾಗಿಲು, ದುರ್ನಾತದ ಶೌಚಾಲಯ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ 2  :- ಪಟ್ಟಣದ ಸಾರ್ವಜನಿಕ 100ಹಾಸಿಗೆ ಆಸ್ಪತ್ರೆಯಲ್ಲಿ ಹೊರರೋಗಿಗಳ ಹಾಗೂ ಒಳರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ವೈದ್ಯರನ್ನು ಕಾಣಲು ನಿಂತುಕೊಂಡೆ ಹೋಗುವ ಗರ್ಭಿಣಿ, ವೃದ್ಧರ ಪಾಡು ಒಂದೆಡೆಯಾದರೆ, ಆಸ್ಪತ್ರೆಯ ಕೆಲವು ಬಾಗಿಲು ತುಕ್ಕು ಹಿಡಿದಿವೆಯಲ್ಲದೆ ಇರುವ ಎರಡು ಬಾಗಿಲಿನಲ್ಲಿ ಒಂದು ಬಾಗಿಲು ಇಲ್ಲದೆ ಇರುವ ಬಗ್ಗೆ ಕಣ್ಣಿಗೆ ಕಾಣಸಿಗುತ್ತದೆ.
ಹೌದು ಇದು ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ಇರುವುದು ಕಂಡುಂಡ ಸತ್ಯವಾಗಿದೆ. ಹೊರಗಡೆ ನೋಡಿದರೆ ದೊಡ್ಡ ಕಟ್ಟಡದಂತೆ ಕಂಡರು ಒಳಗಡೆ ಇಕ್ಕಟ್ಟಿನ ವಾತಾವರಣ ಕಾಣುತ್ತದೆ. ವೈದ್ಯರು ಇರುವ ಕೊಠಡಿಗಳ ಹಾಗೂ ರಕ್ತ ಪರೀಕ್ಷೆ, ಅಯುಷ್ಮಾನ್ ಕಾರ್ಡ್ ಮಾಡಿಸುವ ಕೊಠಡಿಗಳು, ದಂತ ಚಿಕಿತ್ಸಾಲಯ  ಒಂದೆಡೆ ಇರುವುದರಿಂದ ರೋಗಿಗಗಳಿಗೆ ಅದರಲ್ಲಿ ಗರ್ಭಿಣಿ ಮಹಿಳೆಯರು, ವಯೋವೃದ್ದರು  ಸಾಲಾಗಿ ನಿಂತು ಕೊಳ್ಳಲು ಆಗುತ್ತಿಲ್ಲ ರಕ್ತ ಪರೀಕ್ಷೆ ಹಾಗೂ ದಂತವೈದ್ಯರ ಬಳಿ ಹೋಗಬೇಕೆಂದರೆ ಅಲ್ಲಿ ನಿಂತ ಜನರನ್ನು ಸರಿಸಿ ಹೋಗುವುದಂತೂ ಬಹಳಷ್ಟು ತ್ರಾಸಿನ ಕೆಲಸವೆಂದೆ ಹೇಳಬಹುದಾಗಿದೆ ಅಲ್ಲದೆ ದಂತ ವೈದ್ಯರು ಇರುವ ಕೊಠಡಿ ಎದುರೇ ಮಹಿಳಾ ಶೌಚಾಲಯ ಇರುವುದರಿಂದ ಅಲ್ಲಿನ ದುರ್ನಾತ ತಾಳಲಾಗುತ್ತಿಲ್ಲ ಎನ್ನುತ್ತಾರೆ ಅಲ್ಲಿನ ವೈದ್ಯರು. ಈ ಸಮಸ್ಯೆಗೆ ವೈದ್ಯರ ಹಾಗೂ ಜನರ ಸಮಸ್ಯೆಗೆ ಪರಿಹಾರ ಹುಡುಕಿ ವೈದ್ಯರ ಕೊಠಡಿಗಳು ಒಂದೆಡೆ ಮಾಡಿ ರಕ್ತ ಪರೀಕ್ಷೆ ಅಯುಷ್ಮಾನ್ ಕಾರ್ಡ್ ವಿತರಿಸುವ ಕೊಠಡಿಯನ್ನು ಬೇರೆಡೆ ಮಾಡಿದರೆ ಒಳಿತಾಗಬಹುದು.
ರೋಗಿಗಳಿರುವ ವಾರ್ಡ್ ಗಳ 35 ಕೊಠಡಿಯ ಮುಂದೆ ಕೊನೆ ಭಾಗದಲ್ಲಿ ಎರಡು ಬಾಗಿಲು ಇರುವ ಜಾಗದಲ್ಲಿ ಒಂದು ಬಾಗಿಲೇ ಇಲ್ಲಾ, ಆಗಲೇ ದಿನದಿಂದ ದಿನಕ್ಕೆ ಹಳೆಯದಾಗುತ್ತಿರುವ ಆಸ್ಪತ್ರೆ ಸ್ಥಿತಿ ದುಸ್ಥಿತಿ ತಲುಪುತ್ತಿದೆ ಎನ್ನುವುದಕ್ಕೆ ಕೆಲವು ಕಬ್ಬಿಣದ ಬಾಗಿಲು ತುಕ್ಕು  ಹಿಡಿದಿವೆ, ಹೆರಿಗೆ ಕೊಠಡಿಗೆ ಹೋಗುವ ಜಾಗದಲ್ಲಿ ಹೊರಗಡೆ ಹೋಗಲು ಬಾಗಿಲು ಇದ್ದು ಅಲ್ಲಿ ನಿಂತರೆ ಮೂತ್ರ ವಿಸರ್ಜನೆಯ ದುರ್ನಾತ ನೆತ್ತಿಗೇರುತ್ತದೆ
ಆಸ್ಪತ್ರೆಯ ಮೂಲೆಗಳಿರುವ ಜಾಗದಲ್ಲಿ ಗುಟ್ಕಾ ಉಗುಲಿದ ಎಲೆ ಅಡಿಕೆ ತಿಂದು ಉಗುಲಿದ ಕೆಂಪು ಬಣ್ಣದ ಲೇಪನ, ಸುಣ್ಣಬಣ್ಣವಿಲ್ಲದೆ ಬಹಳಷ್ಟು ದಿನವಾಗಿದ್ದು ದುಸ್ಥಿತಿಯನ್ನು ಸರಿಪಡಿಸಿ ಸುಸ್ಥಿತಿಗೆ ತರುವಲ್ಲಿ ವೃತ್ತಿಯಲ್ಲಿ ವೈದ್ಯರಾಗಿ ಅನುಭವವಿರುವ ಕೂಡ್ಲಿಗಿ ಶಾಸಕರು  ಇತ್ತ ಕೂಡ್ಲಿಗಿ ಆಸ್ಪತ್ರೆಯನ್ನು  ಸುಸ್ಥಿತಿಗೆ ತರುವ ಪ್ರಯತ್ನ ನಿಮ್ಮದಾಗಲಿ ಎನ್ನುವ ಮಹದಾಸೆ  ಜನತೆಯಾದ್ದಾಗಿದೆ