ಶಾಸಕರು ಸಹಿ ಮಾಡಿದ ಪತ್ರವೇ ನನ್ನ ಬಳಿ ಇದೆ; ಎಂಪಿಆರ್

ಹೊನ್ನಾಳಿ.ಜೂ.೧೦ : ನನ್ನ ಬಳಿ ಇರುವುದು ಯಾವುದೋ ಕಾಮಗಾರಿಗಳಿಗೆ ಸಹಿ ಮಾಡಿಸಿದ ಪತ್ರವಲ್ಲಾ ಯಡಿಯೂರಪ್ಪನವರು ಸಿಎಂ ಆಗಿ ಮುಂದುವರೆಯುಂತೆ 65 ಕ್ಕೂ ಹೆಚ್ಚು ಜನ ಶಾಸಕರು ಸಹಿ ಮಾಡಿದ ಪತ್ರ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಎಂಬ ಪದ ಬಳಸದೇ,ನನ್ನ ಬಗ್ಗೆ ಹುಲಿವೇಷ ಎಂದು ವಿನಾಃ ಕಾರಣ ನನ್ನ ಹೆಸರನ್ನು ತಂದು ಸಹಿ ಸಂಗ್ರಹದ ಕುರಿತು ಮಾತನಾಡಿದ್ದೀರಿ ಎಂದ ರೇಣುಕಾಚಾರ್ಯ ನೀವು ಚುನಾವಣಾ ಪೂರ್ವದಲ್ಲಿ ಏನು ಮಾಡಿದರೀ ಎಂದು ನನಗೆ ಗೊತ್ತಿದೆ, ನನ್ನನ್ನು ಯಡಿಯೂರಪ್ಪನವರ ವಿರುದ್ದ ಎತ್ತಿಕಟ್ಟಿದ್ದು ಮರೆತು ಹೋಯ್ತಾ ಎಂದ ರೇಣುಕಾಚಾರ್ಯ ರಾಜ್ಯಪಾಲರಿಗೆ ಪತ್ರ ಬರೆದರಲ್ಲಾ ಯಾವ ಕಾರಣಕ್ಕಾಗಿ ನೀವು ಪತ್ರ ಬರಿದಿರಿ ಎಂದು ಪ್ರಶ್ನೇ ಮಾಡಿದರು.ನಾವು ಏನಾದರೂ ಮಾತನಾಡಿದರು ನಮಗೆ ವರಿಷ್ಟರು ಸಹಿಸಲ್ಲೋ ಎಂದು ಹೇಳಿದ್ದೀರಿ, ನಮಗೊಂದು ನ್ಯಾಯ ನಿಮಗೊಂದು ನ್ಯಾಯಾನಾ ಎಂದರು.ವಿನಾಃ ಕಾರಣ ಹುಲಿಯಾಟ, ಹರಿಬೇ ಹಾವು, ದೊಂಬರಾಟ ಎಂದೆಲ್ಲಾ ಹೇಳುತೀರಲ್ಲಾ ನನ್ನ ಬಳಿ 65 ಕ್ಕೂ ಹೆಚ್ಚು ಜನ ಶಾಸಕರು ಸಹಿ ಮಾಡಿರೋ ಪತ್ರ ಇದೇ ಬೆಲ್ಲದ್ ಅವರೇ ಬೇಕಾದರೆ ಹೇಳಿ ಅದನ್ನು ನಿಮಗೆ ಕಳುಹಿಸಿ ಕೊಡುತ್ತೇನೆಂದ ರೇಣುಕಾಚಾರ್ಯ ಇದು ಯಡಿಯೂರಪ್ಪನವರು ಹೇಳಿ ಮಾಡಿಸಿದ ಸಹಿ ಸಂಗ್ರಹ ಅಲ್ಲಾ ಎಂದರು.ಗ್ರಾಮೀಣಾಭಿವೃದ್ದಿ ಇಲಾಖೆಯ ಹಣ ತಡೆ ಹಿಡಿದಾಗ ಸಹಿ ಮಾಡಿದ ಪತ್ರವನ್ನು ಅವಾಗಲೇ ನೀಡಿದ್ದೇ ಈಗ ಅದನ್ನು ಏಕೆ ನಾನು ತೋರಿಸಲಿ ಎಂದ ರೇಣುಕಾಚಾರ್ಯ ಯಡಿಯೂರಪ್ಪನವರ ಪರವಾಗಿ ಶಾಸಕರು ಸಹಿ ಮಾಡಿದ ಪತ್ರವೇ ನನ್ನ ಬಳಿ ಇರೋದು ಎಂದ ರೇಣುಕಾಚಾರ್ಯ, ಇದಕ್ಕೆ ಯಾವ ಸಚಿವರೂ ಕೂಡ ಸಹಿ ಮಾಡಿಲ್ಲಾ ಇನ್ನು ಸಾಕಷ್ಟು ಜನ ಶಾಸಕರು ಸಹಿ ಮಾಡುವುದಾಗೀ ಹೇಳಿದ್ದು ರಾಜ್ಯಾಧ್ಯಕ್ಷರು, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ,ಜೆ.ಪಿ.ನಡ್ಡಾ,ಅಮಿತ್ ಷಾ ಅವರಿಗೆ ಕಳುಹಿಸಲು ಮಾಡಿರುವ ಪತ್ರಕ್ಕೆ ಎಂದ ರೇಣುಕಾಚಾರ್ಯ,ರಾಜ್ಯಾಧ್ಯಕ್ಷರು ಸುಮ್ಮನಿರಲು ಹೇಳಿದ ಕಾರಣ ನಾನು ಪತ್ರವನ್ನು ಯಾರಿಗೂ ತೋರಿಸಿಲ್ಲಾ ಎಂದರು.ನಾನೂ ಕೂಡ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ನನಗೂ ಜವಾಬ್ದಾರೀ ಇದೇ ವಿನಾಃ ಕಾರಣ ನನ್ನ ಹೆಸರು ಎಳೆದುಕೊಂಡು ಬರುವ ಕೆಲಸವನ್ನು ಮಾಡ ಬೇಡಿ ಎಂದ ಶಾಸಕರು, ಇದಕ್ಕೆಲ್ಲಾ ಸಮಯ ಬಂದಾಗ ಉತ್ತರ ನೀಡುತ್ತೇನೆಂದು ಹೇಳಿದರು.