ಶಾಸಕರು ರಾಜಕೀಯ ಮಾಡುವುದಾದರೆ ಚುನಾವಣೆಯಲ್ಲಿ ಮಾಡಿ – ಸವಾಲ್

ಗ್ರಾಮಗಳ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ
ಲಿಂಗಸುಗೂರು.ಜೂ.೦೮-ತಾಲೂಕಿನ ಮಾವಿನಬಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೂಪುರ ರಾಂಪುರ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಮಂಜೂರು ಮಾಡಲಾದ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆ ೭೮ಲಕ್ಷ ರೂಪಾಯಿ ಅನುದಾನದಲ್ಲಿ ೦೬ಕೋಟಡಿಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಹಾಗೂ ಜಲ ನಿರ್ಮಲ ಯೋಜನೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ೨೦ ೨೧ ನೇಸಾಲಿನ, ೬೫,೨೨, ಯೋಜನೆಗೆ ಶಾಸಕ ಡಿ.ಎಸ್ ಹುಲಗೇರಿ ನೀಡಿದರು.
ನಂತರ ಮಾತನಾಡಿದ ಶಾಸಕರು ಗ್ರಾಮಗಳ ಅಭಿವೃದ್ಧಿಗೆ ಬಂದ ಅನುದಾನವು ಊರಿನ ಎಲ್ಲಾ ಸಾರ್ವಜನಿಕರು ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳಬೇಕು ವಿನಾಕಾರಣ ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಮಾಡಬಾರದು ಒಂದು ವೇಳೆ ರಾಜಕೀಯ ಮಾಡಬೇಕಾದರೆ ಚುನಾವಣೆಯಲ್ಲಿ ರಾಜಕೀಯ ಮಾಡಿ ಎಂದು ಪರೊಕ್ಷವಾಗಿ ಬಿಜೆಪಿ ಮುಖಂಡರಿಗೆ ಸವಾಲು ಹಾಕಿದರು.
ಲಿಂಗಸುಗೂರು ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಮುಲಭೂತ ಸೌಲಭ್ಯ ಒದಗಿಸಲು ನನ್ನ ಅವಧಿಯಲ್ಲಿ ಸಾಕಷ್ಟು ಬಾರಿ ಅನುದಾನ ತಂದು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಗೊಮ್ಮೆ ಈಗೊಮ್ಮೆ ಬಿಜೆಪಿ ಬೆಂಬಲಿತ ಮುಖಂಡರು ಸಭೆಯಲ್ಲಿ ಜಲ ನಿರ್ಮಲ ಭಾರತ ಯೋಜನೆಯಡಿ ಮಂಜೂರಾದ ಕೂಡಿಯುವ ನೀರಿನ ಯೋಜನೆಗೆ ಬಂದ ಅನುದಾನ ನಿಮ್ಮ ಕಾಂಗ್ರೆಸ್ ಮುಖಂಡರು ಕೊಳ್ಳೆ ಹೊಡೆದು ಅಭಿವೃದ್ಧಿಗೆ ಹಿನ್ನಡೆ ಯಾಗುತ್ತದೆ ಎಂದು ಶಾಸಕರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಬಿಜೆಪಿ ಬೆಂಬಲಿತ ಮುಖಂಡರು ರಾಜಕೀಯ ಮಾಡಲು ನಾವು ಬಂದಿಲ್ಲಾ ಎಂದಾಗ ಶಾಸಕರು ಕೆಂಡಾಮಂಡಲವಾಗಿ ಗ್ರಾಮದ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ನಾವೆಲ್ಲರೂ ಮುಂದಾಗೊಣ ಇದರಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಎಂಬುದು ಬರುವುದಿಲ್ಲ ಎಂದು ಹೇಳಿ ಸಮಜಾಯಿಷಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶಾಂತಮ್ಮ, ಕಾಂಗ್ರೆಸ್ ಪಕ್ಷದ ಮುಖಂಡರಾದ ಭೂಪನಗೌಡ ಪಾಟೀಲ, ಪಾಮಯ್ಯ ಮುರಾರಿ, ಶರಣಪ್ಪ ಮೇಟಿ, ಹೊನ್ನಪ್ಪ ಮೇಟಿ, ಪ್ರಮೋದ ಕುಲಕರ್ಣಿ, ಎಂಡಿ ರಫೀ, ಪರುಶುರಾಮ ನಗನೂರ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಂಗಮ್ಮ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಅಧಿಕಾರಿ ವಾಸಿಂ, ಕ್ಯಾಸೋಟೇಕ್ ಇಂಜಿನಿಯರ್ ತಿಮ್ಮಣ್ಣ ಸಂಜಿವಪ್ಪ ಹುನಕುಂಟಿ ಸೇರಿದಂತೆ ಇತರರು ಇದ್ದರು.