ಶಾಸಕರು ಅಲ್ಲೇ ಇದ್ದರು: ಅಲ್ಲಮ ಆರೋಪ

ಕಲಬುರಗಿ.ಮೇ 9: ಸೋಮವಾರ ರಾತ್ರಿ ಕಲಬುರಗಿ ಸಂಗಮೇಶ್ವರ ನಗರ ಬಡಾವಣೆಯಲ್ಲಿ ಸ್ವತಃ ಶಾಸಕದತ್ತಾತ್ರೇಯ ಪಾಟೀಲ್ ರೇವೂರ್ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಹಣ ಹಂಚುತ್ತಿದ್ದುದನ್ನು ನಾವೆಲ್ಲಾ ಕಣ್ಣಾರೆ ಕಂಡಿದ್ದೇವೆ ಎಂದು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಹಾಗೂಪೊಲೀಸ್ ಕಮಿಷನರ್ ಬರುತ್ತಿದ್ದಂತೆಯೇ ಶಾಸಕ ರೇವೂರ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರಿದ್ದ ಕಾರು ವಿದ್ಯಾನಗರ ಬಡಾವಣೆಯಹನುಮಾನ್ ಗುಡಿ ಬಳಿ ನಿಲ್ಲಿಸಿದ ಬಳಿಕ ಶಾಸಕ ರೇವೂರ್ ಕಾರಿನಿಂದ ಇಳಿದು ಕತ್ತಲಲ್ಲಿಪರಾರಿಯಾಗಿದ್ದಾರೆ. ಈ ಕುರಿತು ಅವರ ಮೊಬೈಲ್ ಲೊಕೇಷನ್ ಮಾಹಿತಿ ಕಲೆಹಾಕಿದರೆ ಎಲ್ಲವೂ ಬಹಿರಂಗಗೊಳ್ಳಲಿದೆ. ಈ ಕುರಿತು ತಾವು ಖುದ್ದು ಪೊಲೀಸ್‍ಕಮಿನಷರ್ ಅವರಿಗೆ ದೂರು ನೀಡಿರುವುದಾಗಿ ಹೇಳಿದರು.