
ಲಕ್ಷ್ಮೇಶ್ವರ,ಮೇ15: ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ನೂತನ ಶಾಸಕರಾಗಿರುವ ಡಾ. ಚಂದ್ರು ಲಮಾಣಿ ಅವರಿಗೆ ಅನೇಕ ಸಮಸ್ಯೆಗಳು ಅವರಿಗೆ ಸವಾಲಾಗಿವೆ. ಸುಮಾರು 20 ವರ್ಷಗಳ ಹಿಂದೆ ಕಾರ್ಯಕರ್ತಗೊಂಡಿರುವ ತುಂಗಭದ್ರಾ ಕುಡಿಯುವ ನೀರಿನ ಯೋಜನೆ, ಗೆ ಸಂಬಂಧಪಟ್ಟಂತೆ ಮಾಜಿ ಶಾಸಕ ಜಿಎಸ್ ಗಡ್ಡ ದೇವರಮಠ ಅವರು ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನುಷ್ಠಾನಗೊಂಡ ಈ ಯೋಜನೆ ಈಗ ಸಂಪೂರ್ಣ ದುರಸ್ತಿ ಹಂತಕ್ಕೆ ತಲುಪಿದ್ದು ಯಾವುದೇ ಸಂದರ್ಭದಲ್ಲಿ ಪಟ್ಟಣ ನೀರಿನ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.
ಮೇವುಂಡಿಯ ತುಂಗಭದ್ರಾ ನದಿಯಿಂದ 36ಞm ಉದ್ದದ ಪೈಪ್ ಲೈನ್ ಸಂಪೂರ್ಣ ಹಾಳಾಗಿದ್ದು ಚಂಬರುಗಳು ಸಹ ನಿರುಪಯುಕ್ತವಾಗುವ ಮತ್ತು ಸೂರಣಗಿ ಯಲ್ಲಿ ನ ಯಂತ್ರೋಪಕರಣಗಳು ತುಕ್ಕು ಹಿಡಿದು ಹಾಳಾಗಿದ್ದು ಈ ಎಲ್ಲ ಯೋಜನೆಗಳ ಜಾರಿಗೆ ಸುಮಾರು 50 ಕೋಟಿ ಹಣ ಸರ್ಕಾರದಿಂದ ಬರಬೇಕಾಗಿದೆ ಇದು ಶಾಸಕರ ಮೊದಲ ಆದ್ಯ ಕರ್ತವಾಗಬೇಕಿದೆ ಸರ್ಕಾರ ಯಾರದೇ ಇರಲಿ ಜನಪರ ಯೋಜನೆ ಜಾರಿಗೆ ಹೋರಾಟದ ಹಾದಿ ಅನಿವಾರ್ಯ.
ಇನ್ನು ಈಗಾಗಲೇ ಸುಮಾರು 40 ಕೋಟಿ ರು ವೆಚ್ಚದಲ್ಲಿ ಪಟ್ಟಣದಲ್ಲಿ ಒಳಚರಂಡಿ ಯೋಜನೆಯನ್ನು ಜಾರಿಗೊಳಿಸಿದ್ದು ಅಪೂರ್ಣಗೊಂಡಿರುವ ಈ ಯೋಜನೆ ಸಾಕಾರಗೊಳ್ಳಬೇಕಾದರೆ ಇನ್ನೂ ಕನಿಷ್ಠ 35 ರಿಂದ 36 ಕೋಟಿ ರೂ ಅನುದಾನದ ಅವಶ್ಯಕತೆ ಇದೆ.
ಇನ್ನು ನೆನೆಗುದಿಗೆ ಬಿದ್ದಿರುವ ಕೆರೆ ತುಂಬಿಸುವ ಯೋಜನೆ ಮತ್ತು ಶಿರಹಟ್ಟಿ ಭಾಗದಲ್ಲಿನ ನೀರಾವರಿ ಯೋಜನೆಗಳು ಹಳ್ಳ ಹಿಡಿದಿದ್ದು ಇವುಗಳ ಬಗ್ಗೆ ತ್ವರಿತ ಗಮನಹರಿಸಬೇಕಾಗಿದೆ ಕ್ಷೇತ್ರದಲ್ಲಿನ ಲೋಕೋಪಯೋಗಿ ರಸ್ತೆಗಳು ರಾಜ್ಯ ಹೆದ್ದಾರಿಗಳು ಜಿಲ್ಲಾ ಮುಖ್ಯ ರಸ್ತೆಗಳು ಜಿಲ್ಲಾ ಪಂಚಾಯತಿ ರಸ್ತೆಗಳು ಎಲ್ಲವೂ ಹಾಳಾಗಿದ್ದು ಹಂತ ಹಂತವಾಗಿ ಅವುಗಳ ಸುಧಾರಣೆಗೆ ಸರಕಾರದೊಂದಿಗೆ ಅನುದಾನ ಬಿಡುಗಡೆ ಮಾಡಿಸಿ ಕ್ಷೇತ್ರದ ಅಭಿವೃದ್ಧಿಗೆ ನೂತನ ಶಾಸಕರು ಮುಂದಾಗಬೇಕಾಗಿದೆ.