ನವಲಗುಂದ,ಜು17 : ಈ ಸಾರಿ ನನ್ನ ಗೆಲುವಿನಲ್ಲಿ ಮುಸ್ಲಿಂ ಸಮಾಜ ಸೇರಿದಂತೆ ಎಲ್ಲಾ ಸಮಾಜದ ಮುಂಖಡರು ನನ್ನ ಕೈ ಹಿಡಿದಿದ್ದೀರಿ ಮುಸ್ಲಿಂ ಉಪ ಪಂಗಡವಾದ ಪಿಂಜಾರ ನದಾಫ್ ಸಮುದಾಯದ ಪ್ರಮುಖ ಬೇಡಿಕೆಯಾದ ಪಿಂಜಾರ್ ಸಮುದಾಯ ಭವನ ನಿರ್ಮಿಸುವ ಮೂಲಕ ನಿಮ್ಮ ಋಣ ತೀರಿಸುವ ಪ್ರಯತ್ನ
ಮಾಡುತ್ತೇನೆ ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆಮಾಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಕರ್ನಾಟಕ ಪಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಿಂಜಾರ್ ನದಾಫ್ ಸಮುದಾಯವು ಕಾಯಕ ನಿಷ್ಠೆಯಲ್ಲಿ ಮಾದರಿಯಾಗಿದ್ದಾರೆ ಸಮಾಜ ಬಾಂಧವರು ತಾರತಮ್ಯವಿಲ್ಲದೇ ತಮ್ಮ ಕಾಯಕನಿಷ್ಠೆ ಮೆರೆಯುತ್ತ ಇತರರಿಗೆ ಮಾದರಿಯಾಗುವ ಜತೆಗೆ ಅಭಿವದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ ತಮ್ಮ ಸಮಸ್ಯೆಗಳಾಗಲಿ, ಇತರೆ ಕೆಲಸ ಕಾರ್ಯಗಳೇ ಇರಲಿ ದಿನದ 24 ಗಂಟೆಯೂ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ಪಿಂಜಾರ ಸಮುದಾಯದ ಧರ್ಮಗುರುಗಳಾದ ಸಂಗಮ ಪೀರ್ ಶ್ರೀಗಳು ಮಾತನಾಡಿ ಸರ್ವ ಸಮಾಜದವರನ್ನು ಗೌರವದಿಂದ ಕಾಣುವ ಎನ್ ಎಚ್ ಕೋನರಡ್ಡಿಯವರು ಎರಡನೇ ಬಾರಿ ಶಾಸಕರಾಗಿದ್ದು ಅತ್ಯಂತ ಸಂತಸ ತಂದಿದೆ. ಮತಕ್ಷೇತ್ರದ ಅಭಿವೃದ್ಧಿ ಜೊತೆಗೆ ನಮ್ಮ ಅಲೆಮಾರಿ ಪಿಂಜಾರ್ ನದಾಫ್ ಸಮಾಜದವರಿಗೆ ಹೆಚ್ಚಿನ ಆದ್ಯತೆ ಸಿಗುವಂತಾಗಲಿ ಎಂದರು.
ಕರ್ನಾಟಕ ಪಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯಾಧ್ಯಕ್ಷ ಅಬ್ದುಲ್ ರಜಾಕ್ ನದಾಫ್, ಮಾಧ್ಯಮ ಘಟಕದ ಅಧ್ಯಕ್ಷ ಹಸನ್ ಅಂಜಳ, ಸೋಪಿಸಾಬ್ ಸುರಪುರ, ಖಾಸಿಂಸಾಬ್ ಎಳ್ಳಿಮನಿ, ಬಶೀರ್ ಅಹಮ್ಮದ್, ಬಾವಸಾಬ್ ನದಾಫ್, ದೂದ್ ಪೀರ್, ಬಂದೇನವಾಜ್ ನದಾಫ್ ಇತರರು ಇದ್ದರು.