ಶಾಸಕರಿಗೆ ನೂತನ ಸದಸ್ಯರಿಂದ ಸನ್ಮಾನ

ಮುದಗಲ್ ಃ ಪಟ್ಟಣ ಸಮೀಪದ ಹೂನೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ತಲೆಕಟ್ಟು ಗ್ರಾಮದ ಎಸ್ ಸಿ ಮೀಸಲು ಕ್ಷೇತ್ರದಿಂದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಗೆಲವು ಸಾಧಿಸಿದ ದುರುಗಮ್ಮ ಭಜಂತ್ರಿ ರವರ ಪತಿ ಹುಸೇನಪ್ಪ ಭಜಂತ್ರಿ ಮತ್ತು ರುದ್ರಗೌಡ ತಲೆಕಟ್ಟು ಬಸನಗೌಡ ಹುಡೇದ ಹೂನೂರು ಮಹೇಶ ಸರ್ಜಾಪೂರು ಶಿವಾನಂದ ಚಲುವಾದಿ ವಿಶ್ವನಾಥ ಚಲುವಾದಿ ರವರು ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಗೆ ಶಾಲೂ ಮತ್ತು ಹೂ ಮಾಲೆ ಹಾಕಿ ಸನ್ಮಾನ ಮಾಡಿದರು .

ಇದೆ ಸಂದರ್ಭದಲ್ಲಿ ಶಾಸಕ ಹೂಲಗೇರಿ ಗ್ರಾಮದ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕು ಎಂದು ನೂತನ ಗ್ರಾಮ ಪಂಚಾಯತ ಸದಸ್ಯರಿಗೆ ಕಿವಿ ಮಾತು ಹೇಳಿದರು .