ಶಾಸಕರಿಗೆ ಋಣ ತೀರಿಸುವ ಸಮಯ ಬಂದಿದೆ

ಮಾನ್ವಿ,ಮಾ.೨೩- ೨೦೧೮-೧೯ ನೇ ಸಾಲಿನಲ್ಲಿ ಮಾನವಿ ಹಾಗೂ ಸಿರವಾರ ತಾಲೂಕಿನಲ್ಲಿ ಒಟ್ಟು ೩೦೦೦ ಸಾವಿರಕ್ಕೂ ಅಧಿಕ ಭೂ ಹೀನಾ ರೈತರಿಂದ ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಲಾಗಿದ್ದು ಅದರಲ್ಲಿ ೧೩೯೦ ಕ್ಕೂ ಹೆಚ್ಚು ಅರ್ಜಿ ಸ್ವೀಕೃತಗೊಂಡು ಇನ್ನುಳಿದ ಅರ್ಜಿ ತಿರಸ್ಕೃತಗೊಂಡಿದೆ.
ಇವುಗಳನ್ನು ಶಾಸಕರು ಹಾಗೂ ತಾಲೂಕ ಆಡಳಿತದಿಂದ ಸಭೆ ಮಾಡಿ ಸಿರವಾರ ತಾಲೂಕಿನಲ್ಲಿ ೨೬ ಹಾಗೂ ಮಾನ್ವಿ ತಾಲೂಕಿನ ೩ ಜನ ರೈತರು ಮಾತ್ರ ಭೂಮಿ ಪಡೆಯುವುದಕ್ಕೆ ಯೋಗ್ಯರು ಎನ್ನುವ ರೀತಿಯಲ್ಲಿ ಆಯ್ಕೆ ಮಾಡಲಾಗಿದೆ ಭೂಮಿ ಪರಿಷ್ಕರಣ ಸಮಿತಿಯ ಅಧ್ಯಕ್ಷರಾದ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಬಡರೈತರಿಗೆ ಅಕ್ರಮ ಸಕ್ರಮದಡಿ ಭೂಮಿಯನ್ನು ಮಂಜೂರು ಮಾಡಿ ಅವರ ಋಣ ತೀರಿಸುವ ಸುಸಂಧರ್ಭ ನಿಮಗೆ ಈ ಬಂದಿಗೆ ದಯವಿಟ್ಟು ಅವರಿಗೆ ಹಾಲು ಕುಡಿಸಿ ಬದುಕುವುದಕ್ಕೆ ಅವಕಾಶ ಮಾಡಿಕೊಂಡಿ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮಾಡಿ ಮಾತಾನಾಡಿದ ಅವರು ನಾಳೆ ನಡೆಯುವ ಮತ್ತೊಂದು ಸಭೆಯಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಭೂಮಿ ಮಂಜೂರು ಮಾಡುವ ಶಕ್ತಿ ನಿಮಗಿದೆ ದಯವಿಟ್ಟು ಎಲ್ಲರನ್ನೂ ಪರಿಗಣಿಸಿ ಹಾಗೂ ತಿರಸ್ಕರಗೊಂಡ ಅರ್ಜಿಗಳನ್ನು ಪರಿಶೀಲನೆ ಮಾಡಿ ಅದರಲ್ಲಿ ಇರುವ ಬಡವರನ್ನು ಗುರುತಿಸಿ ಅವರಿಗೆ ಕೂಡ ಭೂ ಹಂಚಿಕೆ ಮಾಡಿ ನೀವು ಚುನಾವಣೆಯಲ್ಲಿ ಹೇಳಿದಂತೆ ಋಣವನ್ನು ತೋರಿಸುವುದಕ್ಕೆ ಅದ್ಬುತವಾದ ಅವಕಾಶವಿದೆ ಎಂದರು.
ಈಗಾಗಲೇ ಅರ್ಜಿ ಸಲ್ಲಿಸಿದ ಅನೇಕರು ಗೈರಾಣಿ ಅಥಾವ ಗೋಮಾಳ ಭೂಮಿಯಲ್ಲಿ ಬಿತ್ತನೆ ಮಾಡಿಕೊಂಡಿದ್ದಾರೆ. ಅದು ಕೂಡ ಮಳೆಯಾದರೆ ಮಾತ್ರ ಬೆಳೆ ಇಲ್ಲವಾದಲ್ಲಿ ಅದು ಉಪಯೋಗವಿಲ್ಲ ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ, ಭೂ ಹೀನಾ ರೈತರಿಗೆ ಅಕ್ರಮ ಸಕ್ರಮದಡಿಯಲ್ಲಿ ಭೂಮಿ ವಿತರಣೆ ಮಾಡುವಂತೆ ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಕೂಡ ಕ್ರಮಕೈಗೊಂಡಿದೆ ಆದರೂ ಸ್ಥಳೀಯ ತಾಲೂಕ ದಂಡಧಿಕಾರಿಗಳು ಹಾಗೂ ಶಾಸಕರಾದ ತಾವುಗಳು ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ತಿಳಿಯುತ್ತಿಲ್ಲ ದಯವಿಟ್ಟು ಬಡವರನ್ನು ರಕ್ಷಣೆ ಮಾಡುವ ಸಮಯ ನಿಮಗೆ ಬಂದಾಗಿದೆ ಇದನ್ನು ಸದ್ಬಳಿಕೆ ಮಾಡಿಕೊಂಡು ರೈತರ ಋಣವನ್ನು ತೀರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ವಿರೇಶನಾಯಕ ತಾಲೂಕ ಅಧ್ಯಕ್ಷ, ವೆಂಕೋಬ ನಾಯಕ ಸಿರವಾರ ಉಪಾಧ್ಯಕ್ಷ, ಮಲ್ಲೇಶ ಮದ್ಲಾಪೂರ ಕಾರ್ಯದರ್ಶಿ ಇದ್ದರು.