ಶಾಸಕರಿಂದ ೨೫ ಸಾವಿರ ಬಹುಮಾನ ವಿತರಣೆ

ಸಿರವಾರ,ಮಾ.೨೪- ತಾಲೂಕಿನ ಅತ್ತನೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವ ಬಳಗದಿಂದ ಹಮ್ಮಿಕೊಂಡಿದ ಕ್ರಿಕೆಟ್ ಟೂರ್ನಮೆಂಟ್ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನ ೨೫ ಸಾವಿರ ರೂ ಕಪ್ ನ್ನು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಸ್ವಂತವಾಗಿ ತಂಡಕ್ಕೆ ನೀಡಿ ಮಾತನಾಡಿ, ಯುವಕರು ಇದೇ ರೀತಿ ಎಲ್ಲಾ ಕ್ರೀಡೆಗಳನ್ನು ಆಯೋಜನೆ ಮಾಡಿ, ಆಟಗಳನ್ನು ಆಡಿ ಜಾತಿ,ಧರ್ಮ,ವರ್ಗ ತಾರತಮ್ಯವನ್ನು ಹೋಗಲಾಡಿಸಿ ಸಹೋದರಂತೆ ಇರಬೇಕು ಎಂದರು.
ದ್ವಿತೀಯ ಬಹುಮಾನ ೧೨ ಸಾವಿರ ರೂ ಹಾಗೂ ಕಪ್‌ಅನ್ನು ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು ವಿತರಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಂಬುನಾಥ ಯಾದವ, ನಾಗರಾಜ ಭೋಗಾವತಿ, ರಾಜಾ ಆದರ್ಶನಾಯಕ, ಸೂಗುರಯ್ಯ ಸ್ವಾಮಿ, ಪಂಪಾಪತಿ, ವೀರಭದ್ರಯ್ಯ ಸ್ವಾಮಿ, ಜೆಮ್ಸರ ಅಲಿ ಸೇರಿದಂತೆ ಇನ್ನಿತರರು ಇದ್ದರು.