ಶಾಸಕರಿಂದ ಹಕ್ಕು ಪತ್ರ ವಿತರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.2: ನಗರದ 38ನೇ ವಾರ್ಡ್ ವ್ಯಾಪ್ತಿಯ ಬಸವನಕುಂಟೆ, ಕಾರ್ಖಾನಕುಂಟೆ ಹಾಗೂ ಶಿವಲಿಂಗನಗರದ ಅರ್ಹ ಫಲಾನುಭವಿಗಳಿಗೆ ಇಂದು‌ ನಗರ ಶಾಸಕ‌ ಗಾಲಿ ಸೋಮಶೇಖರ ರೆಡ್ಡಿ ಹಕ್ಕು ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವೀರಶೇಖರ ರೆಡ್ಡಿ, ಶ್ರೀನಿವಾಸ್ ಮೋತ್ಕೂರ್, ಅನೂಪ್ ಕುಮಾರ್, ವಾರ್ಡ್  ಮುಖಂಡರಾದ ತಿಮ್ಮಪ್ಪ, ಯೇಸು, ಅರುಣ್, ಅಪ್ಪಯ್ಯ, ಯಲಪ್ಪ, ಮೋಹನ್, ಸುಧಾಕರ್, ಚಂದ್ರ, ಸೀನ, ಆನಂದ್, ಯಶವಂತ್, ಪಾಮಯ್ಯ, ಮಹೇಶ್, ಮಂಜು, ವೀರೇಶ್, ಓಂಪ್ರಕಾಶ್, ವಿನೋದ್, ಬಸವರಾಜ ಮತ್ತು ಇತರರು ಉಪಸ್ಥಿತರಿದ್ದರು.