ಶಾಸಕರಿಂದ ಸ್ವಚ್ಛತಾ ಕಾರ್ಯಕ್ರಮ

ಧಾರವಾಡ, ನ 22- ಮಹಾತ್ಮಾ ಗಾಂಧಿಜಿಯವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆಯ ಮೇರೆಗೆ ದೇಶದ ಜನತೆ ಸ್ವಚ್ಚತೆಗೆ ನೀಡುತ್ತಿರುವ ಆದ್ಯತೆ ಹಾಗೂ ಸುತ್ತಮುತ್ತಲಿನ ವಾತಾವರಣ ಸ್ವಚ್ಛ ಮಾಡುವದರಿಂದ ರೋಗರುಜಿನಗಳು ಕಡಿಮೆಯಾಗಿ ಆರೋಗ್ಯದಲ್ಲಿ ವೃದ್ದಿಯಾಗುವದು ಹಾಗೂ ವಿಶೇಷವಾಗಿ ಯುವಕರು ಸ್ವಚ್ಚತೆ ಬಗ್ಗೆ ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕರಾದ ಅಮೃತ ದೇಸಾಯಿ ತಿಳಿಸಿದರು.
ಧಾರವಾಡ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿಂದು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ದೇಶವು ಗಾಂಧೀಜಿಯವರ ಕನಸಿನಂತೆ ಸ್ವಚ್ಛ ಭಾರತವಾಗಲು ಯುವಕರ ಪಾತ್ರ ಮಹತ್ತರ ಎಂದರು.
ಬಿಜೆಪಿ ಯುವಮೋರ್ಚಾ ನಗರ ಅಧ್ಯಕ್ಷ ಶಕ್ತಿ ಹಿರೇಮಠ, ಕಿರಣ ಉಪ್ಪಾರ, ಅನೀಲ ಮೋರೆ, ತಿಪ್ಪಣ್ಣ ಮಜ್ಜಗಿ, ಶ್ರೀನಿವಾಸ ಕೋಟ್ಯಾನ ಹರೀಶ ಬಿಜಾಪುರ, ಶಿವಯ್ಯ ಹಿರೇಮಟ ಸಂಗಮ ಹಂಜಿ, ವಿನಾಯಕ ಗೋಂಧಳಿ, ಮುತ್ತು ಬನ್ನೂರ, ಈರಣ್ಣ ಹಪ್ಪಳಿ, ಸಿದ್ದು ಕಲ್ಯಾಣಶೆಟ್ಟಿ, ನಿರ್ಮಲಾ ಜವಳಿ, ಬಸವರಾಜ ರುದ್ರಾಪುರ, ಮಂಜು ಕಮ್ಮಾರ, ಮಂಜುನಾಥ ಯರಗಟ್ಟಿ, ಮಂಜುನಾಥ ಸಿದ್ದಾಪುರ, ಸೂರಜ ಅಳಗವಾಡಿ, ವಿವೇಕ ಬಂಡಿ, ಶಫಿ ಬಿಜಾಪುರ, ಜಗ್ಗು ಚಿಕ್ಕಮಠ, ಪ್ರಕಾಶ ಇಂಗಳೆ, ಮಂಜುನಾಥ ನೀರಲಕಟ್ಟಿ, ಸಂತೋಷ, ವೀರೇಶ ಶೆಟ್ಟರ, ಮಂಜು ನಡಟ್ಟಿ, ಮಾದು ಅಳಗವಾಡಿ, ಬಸಣ್ಣ ಬಾಳಗಿ, ನಿಂಗಪ್ಪ ಸಪ್ಪುರಿ, ಕಿರಣ ತೋಗಿ, ಅಮರೀಶ್ ಮದರಿಮಠ, ಸಚಿನ್ ಚವಾನ, ಸಾಗರ ಜೋಶಿ, ರಾಘವೇಂದ್ರ ತುಪ್ಪದ, ಶ್ರೀಕಾಂತ ಹಳಿಗೆರಿಮಠ, ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.