ಶಾಸಕರಿಂದ ಸ್ಯಾನಿಟೈಸರ ಸಿಂಪರಣೆಗೆ ಚಾಲನೆ

ದೇವದುರ್ಗ.ಜೂ.೭-ವೀರಶೈವ ಲಿಂಗಾಯತ ಸಮಾಜದ ಮುಖಂಡರಿ ನಾಡಿಗೆ, ದೇಶಕ್ಕೆ ಸಾಕಷ್ಟು ಕೊಡುಗೆ ನೀಡಲಾಗಿದೆ ಎಂದು ಶಾಸಕ ಶಿವನಗೌಡ ನಾಯಕ ಅವರು ಹೇಳಿದರು.
ತಾಲೂಕಾ ವೀರಶೈವ ಲಿಂಗಾಯತ ಸಮಾಜ, ಪುರಸಭೆ ದೇವದುರ್ಗ ರವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಏರ್ಪಡಿಸಲಾಗಿದ್ದ ದೇವದುರ್ಗ ಪಟ್ಟಣದ ೨೩ ವಾರ್ಡಗಳಿಗೆ ಸ್ಯಾನಿಟೈಸರ ಸಿಂಪರಣೆ ಕಾರ್ಯಕ್ರಮವನ್ನು ಬಸವೇಶ್ವರ ಮೂರ್ತಿಗೆ ಮಾರ್ಲಾಪಣೆ ಮಾಡಿ, ಸೋಮವಾರ ಮಾತನಾಡಿದರು.
ಸಾವಿರಾರು ವರ್ಷಗಳಿಂದಲೂ ವೀರಶೈವ ಬಾಂಧವರು ಅಕ್ಷರ, ಅನ್ನ ದಾಸೋಹದಂತಹ ವಿವಿಧ ಕಾರ್ಯಕ್ರಮಗಳನ್ನು ಜನತೆಗೆ ನೀಡಿ ಹೆಸರುವಾಸಿಯಾಗಿದ್ದಾರೆ. ೧೨ನೇ ಶತಮಾನದಲ್ಲಿನ ಬಸವಣ್ಣನವರ ಕಾಯಕ ದಾಸೋಹದ ರೀತಿಯಲ್ಲಿ ಸಮಾಜ ಮುನ್ನೇಡೆಯುತ್ತಿರುವುದು ಸಂತಸ ತಂದಿದೆ ಜೊತೆಗೆ ಕರೋನಾದಂತಹ ರೋಗದ ಸಂದರ್ಭದಲ್ಲಿ ೨೩ ವಾರ್ಡಗಳಿಗೆ ಸಮಾಜದ ವತಿಯಿಂದ ಸ್ಯಾನಿಟೈಸರ ಸಿಂಪರಣೆ ಮಾಡುತ್ತಿರುವ ಸಮಾಜದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕರೋನಾ ರೋಗವನ್ನು ಜನತೆ ಬುದ್ದಿವಂತಿಕೆಯಿಂದ ದೂರವಿಡಬೇಕಾಗಿದೆ. ಮಾಸ್ಕನ್ನು ಮೂಗು ಮತ್ತು ಬಾಯಿ ಮುಚ್ಚುವ ರೀತಿಯಲ್ಲಿ ಧರಿಸಿಕೊಳ್ಳಬೇಕು, ಕಡ್ಡಾಯವಾಗಿ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಂಡು ಸುರಕ್ಷಿತವಾಗಿರಬೇಕು, ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಸಮಾಜದ ಅಧ್ಯಕ್ಷ ಡಾ.ಕಿರಣ್ ಖೇಣೇದ ಅವರು ಮಾತನಾಡಿ. ಸಮಾಜದವತಿಯಿಂದ ಹಿಂದಿನಿಂದಲೂ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ್ದೇವೆ. ಹಿಂದಿನ ಕರೋನಾ ರೋಗದ ಲಾಕಡೌನನಲ್ಲಿ ರಕ್ತದಾನ ಮಾಡುವ ಮುಖಾಂತರ ಸಮಾಜದವತಿಯಿಂದ ಸೇವೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಸಹ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಯೋಜನೆಗಳು ಕುರಿತು ಮಾಹಿತಿ ನೀಡಿದರು.
ಈಸಂದರ್ಭದಲ್ಲಿ ಡಾ.ಬನದೇಶ್ವರ, ಮುಖ್ಯಾಧಿಕಾರಿ ಶರಣಪ್ಪ, ವಾರದ ಬಸವರಾಜಪ್ಪ, ಚಂದ್ರಶೇಖರ ಪಾಟೀಲ್ ಮಿಯ್ಯಾಪೂರು, ಬಸವರಾಜಪ್ಪ ಬಂಡೇಗುಡ್ಡ, ವೆಂಕಟರಾಯಗೌಡ ಬೆನಕನ, ಚಿಕ್ಕಬೂದೂರು ಶಿವರಾಜಪ್ಪ ಉಪಸ್ಥಿತರಿದ್ದರು.