ಶಾಸಕರಿಂದ ಸ್ಟೀಮರ್ ವಿತರಣೆ

ಲಕ್ಷ್ಮೇಶ್ವರ, ಮೇ 21 : ಶಾಸಕರಾದ ರಾಮಣ್ಣ ಎಸ್. ಲಮಾಣಿಯವರು ಗುರುವಾರ ಲಕ್ಷ್ಮೇಶ್ವರ ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅವಶ್ಯಕತೆ ಇರುವವರಿಗೆ ಸ್ಟೀಮ್ ವೆಪೆÇೀರೈಸರ್ ವಿತರಿಸಿದರು.
ನಂತರ ವಡೆಯರ ಮಲ್ಲಾಪುರದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿ ಆರಂಭವಾಗಿರುವ 100 ಬೆಡ್’ಗಳ ಕೋವಿಡ್ ಆರೈಕೆ ಕೇಂದ್ರವನ್ನು ವೀಕ್ಷಿಸಿ, ಅಲ್ಲಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ತಹಶೀಲ್ದಾರರಾದ ಎಸ್. ಆರ್. ಸಿದ್ದನಗೌಡರ, ಉಪ ತಹಶೀಲ್ದಾರರಾದ ಮಂಜುನಾಥ ದಾಸಪ್ಪನವರ, ಶಿರಹಟ್ಟಿ ಪೆÇೀಲಿಸ್ ವೃತ್ತ ನಿರೀಕ್ಷಕರಾದ ವಿಕಾಸ ಪಿ. ಎಲ್., ಪುರಸಭೆಯ ಮುಖ್ಯಾಧಿಕಾರಿಗಳಾದ ಶಂಕರ ಹುಲ್ಲಮ್ಮನವರ, ಕಂದಾಯ ನಿರೀಕ್ಷಕರಾದ ಬಸವರಾಜ ಕಾತ್ರಾಳ, ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳಾದ ಡಾ. ಗಿರೀಶ ಮರಡ್ಡಿ, ಬಿಜೆಪಿ ಮುಖಂಡರಾದ ಮಹೇಶ ಲಮಾಣಿ, ಲಕ್ಷ್ಮಣ ಲಮಾಣಿ, ಚಂಬಣ್ಣ ಬಾಳಿಕಾಯಿ, ಸೋಮಣ್ಣ ಮುಳಗುಂದ, ಷಣ್ಮುಖ ಗೋಡಿ, ಶಿವಯೋಗಿ ಅಂಕಲಕೋಟಿ, ಬಿಜೆಪಿ ಶಿರಹಟ್ಟಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗಂಗಾಧರ ಮೆಣಸಿನಕಾಯಿ, ನಗರ ಘಟಕದ ಅಧ್ಯಕ್ಷರಾದ ದುಂಡೇಶ ಕೊಟಗಿ, ಉಪಾಧ್ಯಕ್ಷರಾದ ರುದ್ರಪ್ಪ ಉಮಚಗಿ, ಅರುಣ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ವಿಜಯ ಕುಂಬಾರ, ಚಂದ್ರು ಹಂಪಣ್ಣವರ, ಪ್ರವೀಣ ಬೋಮಲೆ, ರಮೇಶ ಹಾಳದೋಟದ, ಸಿದ್ದು ದುರಗಣ್ಣವರ, ನವೀನ ಬೆಳ್ಳಟ್ಟಿ, ಪ್ರಕಾಶ ಮಾದನೂರ, ವಿಶಾಲ ಬಟಗುರ್ಕಿ, ಗದಗ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಪ್ರಮುಖರಾದ ಮಂಜುನಾಥ ಪಿ. ಉಳ್ಳಾಗಡ್ಡಿ, ಬಸವರಾಜ ಎಸ್. ಕಲ್ಲೂರ ಇವರು ಉಪಸ್ಥಿತರಿದ್ದರು.