ಶಾಸಕರಿಂದ `ಸದಾಶಿವ ತೀರ್ಥಕೆರೆ’ ಕಾಮಗಾರಿ ವೀಕ್ಷಣೆ

ಪುತ್ತೂರು, ಮಾ.೨೮- ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಯೋಜಕತ್ವದಲ್ಲಿ ಸದಾಶಿವ ತೀರ್ಥಕರೆ ಸಮಿತಿಯ ನೇತೃತ್ವದಲ್ಲಿ `ನಮ್ಮೂರು ನಮ್ಮಕೆರೆ’ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಬನ್ನೂರು ಗ್ರಾಪಂ ವ್ಯಾಪ್ತಿಯ ಸದಾಶಿವ ತೀರ್ಥಕೆರೆ ಕಾಮಗಾರಿಯನ್ನು ಶಾಸಕ ಸಂಜೀವ ಮಠಂದೂರು ಶನಿವಾರ ವೀಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ತೀರ್ಥಕೆರೆ ಸಮಿತಿ ಉಪಾಧ್ಯಕ್ಷ ಡೆನ್ನಿಸ್ ಮಸ್ಕರೇನಸ್, ಸಮಿತಿ ಜೊತೆ ಕಾರ್ಯದರ್ಶಿ ರತ್ನಾಕರ ಪ್ರಭು, ಸಮಿತಿ ಸದಸ್ಯ ಡೀಕಯ್ಯ, ಬಿಜೆಪಿ ಗ್ರಾಮಾಂತರ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಬನ್ನೂರು ಗ್ರಾಪಂ ಸದಸ್ಯೆ ಸುಪ್ರೀತಾ ರತ್ನಾಕರ ಪ್ರಭು ಉಪಸ್ಥಿತರಿದ್ದರು.