ಶಾಸಕರಿಂದ ಶಿಥಿಲ ಕಟ್ಟಡ ವೀಕ್ಷಣೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು29: ಪಟ್ಟಣದ ಅತ್ಯಂತ ಹಳೆಯದಾದ ಮತ್ತು ಶಿಥಿಲಗೊಂಡ ಅತ್ಯಂತ ಹಳೆಯದಾದ ಸರ್ಕಾರಿ 2ನೇ ನಂಬರ್ ಶಾಲಾ ಕಟ್ಟಡವನ್ನು ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ವೀಕ್ಷಿಸಿದರು.
ನೂರಾರು ವರ್ಷಗಳ ಹಿಂದಿನ ಈ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಸೋಲುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದೆ . ಈ ಹಿನ್ನಲೆಯಲ್ಲಿ ಇದೇ ನಿವೇಶನದಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸುವಂತೆ ಶಾಸಕರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಚಂದ್ರು ಲಮಾಣಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಬಿಎಮ್ ಮುಂದಿನ್ಮನಿಯವರಿಗೆ ಈ ಶಾಲೆಯ ಕಟ್ಟಡದ ನೀಲ ನಕ್ಷೆಯನ್ನು ಅಂದಾಜು ಯೋಜನಾ ಪಟ್ಟಿಯನ್ನು ಸಿದ್ಧಗೊಳಿಸಿ ಡಿಡಿಪಿಐ ಮುಖಾಂತರ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರಲ್ಲದೆ ಸರ್ಕಾರ ಮಟ್ಟದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಚರ್ಚಿಸಿ ಅನುದಾನ ಕಲ್ಪಿಸುವ ಭರವಸೆ ನೀಡಿದರು.
ಶಾಸಕರೊಂದಿಗೆ ಶಾಲಾ ಮೇಲ್ ಉಸ್ತುವಾರಿ ಸಮಿತಿ ಸದಸ್ಯರುಗಳು ಮತ್ತು ಲಕ್ಷ್ಮೇಶ್ವರ ನಗರ ಘಟಕದ ಬಿಜೆಪಿ ಅಧ್ಯಕ್ಷ ದುಂಡೇಶ್ ಕೊಟಗಿ, ಶಿರಹಟ್ಟಿ ಮಂಡಲ್ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮೆಣಸಿನಕಾಯಿ, ಶಕ್ತಿ ಕತ್ತಿ, ನವೀನ್ ಬೆಳ್ಳಟ್ಟಿ, ಗಿರೀಶ್ ಚೌರೆಡ್ಡಿ, ರಮೇಶ ಹಾಳದೋಟದ, ಸಂತೋಷ್ ಜಾವುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.