ಶಾಸಕರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜ.19 ಪಟ್ಟಣದಲ್ಲಿ ಶಾಸಕ ಭೀಮಾ ನಾಯ್ಕ್ ಇಂದು ಪೂರ್ಣಗೊಂಡ ಕಟ್ಟಡಗಳ ಉದ್ಘಾಟನೆ ಹಾಗೂ ಭೂಮಿ ಪೂಜೆಯನ್ನು ನೆರವೇರಿಸಿದರು.
 ಡಿಎಂಎಫ್ ಹಾಗೂ ಕೆಕೆಆರ್‌ಡಿ ಜಿ ಅನುದಾನದಲ್ಲಿ ನಿರ್ಮಾಣಗೊಂಡ ಪಾಪ ಸ್ವಾಮಿ ಪದವಿ ಪೂರ್ವ ಕಾಲೇಜ್ ಕಟ್ಟಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಲ್ಕು ಕೊಠಡಿ, ಅಂಗನವಾಡಿ ಕಟ್ಟಡ, ಗಂಗಾವತಿ ಭೀಮಪ್ಪನವರ  ಪದವಿಪೂರ್ವ ಕಾಲೇಜ್  ಕಟ್ಟಡ, ಪ್ರಥಮ ದರ್ಜೆ ಕಾಲೇಜಿನ ಬೋಧನಾ ಕೊಠಡಿ ಸೇರಿದಂತೆ ವಿವಿಧ ಕಟ್ಟಡಗಳ ಉದ್ಘಾಟನೆ ಮಾಡಿದರು.
 ಶಾದಿ ಮಹಲ್ ಮುಂದುವರೆದ ಕಾಮಗಾರಿಗೆ ಭೂಮಿ ಪೂಜೆ, ಓಂ ಶಾಂತಿ ರಸ್ತೆಗೆ ಸಿಸಿ ರಸ್ತೆ ಮಾಡಲು 40 ಲಕ್ಷ ರೂ. ಭೂಮಿ ಪೂಜೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ಕಾಮಗಾರಿಗೆ ಚಾಲನೆ ನೀಡಲಾಯಿತು.
 ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಮರಿ ರಾಮಪ್ಪ,   ಮಂಜುಳಾ ಕೃಷ್ಣನಾಯ್ಕ್,, ಗಣೇಶ್ ನಾಯ್ಕ್  ಮುಖಂಡರಾದ  ಹಾಲ್ದಾಳ್  ವಿಜಯಕುಮಾರ್, ಅಕ್ಕಿ ತೋಟೇಶ್, ಹುಡೇದ್  ಗುರುಬಸವರಾಜ್ , ನೂರಿ, ಕೃಷ್ಣ ಬಾಬು, ಗುತ್ತಿಗೆದಾರ ವಿಜೇತ, ಲೋಕೋಪಯೋಗಿ ಇಲಾಖೆಯ ಪುರುಷೋತ್ತಮ್, ಶಾಲಾ ಮುಖ್ಯ ಗುರುಗಳು ಕೃಷ್ಣ ನಾಯ್ಕ್ ಇತರರಿದ್ದರು.