ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

ಮಾನ್ವಿ,ಜ.೧೧- ತಾಲೂಕಿನಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾಮಗಾರಿಗಳು ಮಾಡಲಾಗಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಕೂಡ ನನ್ನ ಅಧಿಕಾರಾವಧಿಯಲ್ಲಿ ಉತ್ತಮ ಕೆಲಸ ಮಾಡುವ ಗುರಿಯನ್ನು ಹೊಂದಿದ್ದೇನೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ನಂತರ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ೨೦೨೧-೨೨ ನೇ ಸಾಲಿನ ವಾಟರ್‌ಬಾವಿಯಿಂದ ಸಾದಾಪುರ ತಾಂಡದವರೆಗೆ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ೩೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ. ಮಾನ್ವಿ-ದದ್ದಲ ಮುಖ್ಯ ರಸ್ತೆಯಿಂದ ದದ್ದಲ್ ಗ್ರಾಮದವರಿಗೆ ೨೦೨೧-೨೨ ನೇ ಸಾಲಿನ ಕೆ ಕೆ ಆರ್ ಡಿ ಬಿ ಯೋಜನೆ ಅಡಿಯಲ್ಲಿ ೨೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ
ಕಾಮಗಾರಿಗೆ ಶಂಕುಸ್ಥಾಪನೆ, ಮುನ್ನೂರು-ರಂಗದಾಳ ಗ್ರಾಮದವರೆಗೆ ೨೦೨೧-೨೨ ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ೫೦ ಲಕ್ಷರೂಪಾಯಿಗಳ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ, ಚೀಕಲಪರ್ವಿ ಗ್ರಾಮದಿಂದ ಚೀಕಲಪರ್ವಿ ಕ್ಯಾಂಪ್, ಬುದಿನ್ನಿ ಕ್ಯಾಂಪ್ ಕ್ರಾಸ್ ವರೆಗೆ ೨೦೨೧-೨೨ ನೇ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ೧ ಕೋಟಿ ೨೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ.
ಚೀಕಲಪರ್ವಿ ಗ್ರಾಮದಿಂದ ಜಾಗೀರಪ್ಪನ್ನೂರು ಗ್ರಾಮದವರೆಗೆ ೨೦೨೧-೨೨ ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಯೋಜನೆ ಅಡಿಯಲ್ಲಿ ೬ ಕೋಟಿ ೨೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ, ಚಿಕ್ಕಕೊಟ್ಟೆಕಲ್ ಗ್ರಾಮದಿಂದ ನಲಗಮದಿನ್ನಿ ಕಾಸರೆಗೆ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ೧ ಕೋಟಿ ೮೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ, ಉಮಳಿಹೊಸೂರು, ಈರಲಗಡ್ಡಿ ಗ್ರಾಮಗಳಲ್ಲಿ ಕೆ ಕೆ ಆರ್ ಡಿ ಬಿ ಯೋಜನೆ ಅಡಿಯಲ್ಲಿ ೧೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೈಮಾಸ್ ಲೈಟ್ ಉದ್ಘಾಟನೆ.
ಹೀಗೆ ಒಟ್ಟು ಅಂದಾಜು ೧೦ ಕೋಟಿ ೫೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಲ್ಲ ಗ್ರಾಮದ ಮುಖಂಡರು, ಜೆಡಿಎಸ್ ಮುಖಂಡರು, ಪಕ್ಷದ ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.