ಶಾಸಕರಿಂದ ಮದ್ದರ್ಕಿ ಹಾರಣಗೇರಾ ರಸ್ತೆ ಡಾಂಬರಿಕರಣ ವೀಕ್ಷಣೆ

ಶಹಾಪುರ:ಜೂ.5:ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ 9 ಕೊಟಿ ರೂ ವೆಚ್ಚದಲ್ಲಿ ಕೈಗೊಂಡ, ತಾಲುಕಿನ ಮದ್ದರ್ಕಿ ವಾಯ್ ಗೋಗಿ ಪೇಠ ಹಾರಣಗೇರಾ ರಸ್ತೆ ಡಾಂಬರಿಕರಣದ ಕಾಮಗಾರಿಯನ್ನು ಮಾಜಿ ಸಚಿವ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರವರು ವಿಕ್ಷಣೆ ಮಾಡಿದರು.ಗ್ರಾಮೀಣ ಜನರಿಗೆ ಸಂಪರ್ಕ ಸೇತುವೆಯಾಗಿರುವ ಈ ರಸ್ತೆಗಳು ವರದಾನವಾಗಿವೆ. ಕಲಬುರ್ಗಿಯಿಂದ ಬರುವ ಜನರು ಮದ್ದರ್ಕಿ ಮುಖಾಂತರ ಹಾರಣಗೇರಾ ದರ್ಶನಾಪುರ, ಗೋಗಿ ಸಿಂಗನಳ್ಳಿ ಕೊಡಮನಳ್ಳಿ ಜನರು ಶಿಘ್ರವಾಗಿ ಈ ರಸ್ತೆಯ ತಮ್ಮ ಸ್ವಗ್ರಾಮ ತಲುಪಬಹುದಾಗಿದೆ. ಇದರಿಂದ ರೈತರಿಗೆ ಜನ ಸಾಮಾನ್ಯರಿಗೆ ಈ ರಸ್ತೆಗಳು ಹೆಚ್ಚು ಅವಶ್ಯಕವಾಗಿವೆ. ಎಂದ ದರ್ಶನಾಪುರ ತಿಳಿಸಿದರು. ಬೈಪಾಸ್ ರಸ್ತೆಗಳಿಂದ ನಮ್ಮ ಅವಶ್ಯಕ ಕಾರ್ಯಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಹಳ್ಳಿಯ ಜನರು ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಹೊಲಗದ್ದೆಗಳನ್ನು ಉತ್ತಮ ಫಸಲು ಬರುವಂತೆ ಶ್ರಮಿಸಿದಲ್ಲಿ ದುಡಿಮೆ ಸಾರ್ಥಕವಾಗುತ್ತದೆ ಎಂದು ಅವರು ತಿಳಿಸಿದರು.ಈ ಸಮಯದಲ್ಲಿ ಮುಖಂಡರಾದ ರವರು ಹಾಜರಿದ್ದರು.