ಶಾಸಕರಿಂದ ಮತಗಟ್ಟೆ ಕೇಂದ್ರಗಳಿಗೆ ಭೇಟಿ- ಪರಿಶೀಲನೆ


ಹುಬ್ಬಳ್ಳಿ, ಅ 29- ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಹು-ಧಾ ಪೂರ್ವ ಮತಕ್ಷೇತ್ರ ವ್ಯಾಪ್ತಿಯ 03 ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿದ ಶಾಸಕ ಪ್ರಸಾದ ಅಬ್ಬಯ್ಯ ಅವರು ಅಲ್ಲಿನ ಸ್ಥಿತಿಗತಿ ಯನ್ನು ಪರಿಶೀಲಿಸಿದರು.
ಗದಗ ರಸ್ತೆಯ ರೈಲ್ವೆ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಗೆ (ನಂ.39) ಭೇಟಿ ನೀಡಿದ ಸಂದರ್ಭದಲ್ಲಿ ಕೆಲ ನೋಂದಾಯಿತ ಹೊಸ ಪದವೀಧರ ಮತದಾರರಿಗೆ ತಮ್ಮ ಮತಗಟ್ಟೆ ಕೇಂದ್ರದ ಬಗ್ಗೆ ಮೊಬೈಲ್ ನಲ್ಲಿ ಮಾಹಿತಿ ಬಂದರೂ ಆ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದು ಹಾಗೂ ಕುಟುಂಬದ ಕೆಲ ಸದಸ್ಯರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಹಾಗೂ ಕೆಲ ಕುಟುಂಬದ ಸದಸ್ಯರ ಪೈಕಿ ಒಬ್ಬೊಬ್ಬರ ಹೆಸರು ಬೇರೆ ಬೇರೆ ಮತಗಟ್ಟೆಗಳಲ್ಲಿ ಬಂದಿರುವುದು ಕಂಡು ಬಂದಿತು. ಈ ಎಲ್ಲದರ ನ್ಯೂನ್ಯತೆಗಳ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ ಶಾಸಕರು, ಇಂಥ ಕೆಲ ನ್ಯೂನ್ಯತೆಗಳನ್ನು ಶೀಘ್ರ ಬಗೆಹರಿಸಿ ಅರ್ಹ ಪದವೀಧರ ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡುವ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲು ಹೇಳಿದರು.
ನಂತರ ಬ್ರಾಡ್ ವೇಯ ಟೌನ್ ಪೆÇಲೀಸ್ ಠಾಣೆಯ ಎದುರಿನ ಮತಗಟ್ಟೆ ಹಾಗೂ ನ್ಯೂ ಇಂಗ್ಲೀಷ್ ಶಾಲೆಯ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕಿದರು.
ಪಾಲಿಕೆ ಮಾಜಿ ಸದಸ್ಯರಾದ ಗಣೇಶ ಟಗರಗುಂಟಿ, ದಶರಥ ವಾಲಿ, ಮೋಹನ ಅಸುಂಡಿ, ವಿಜನಗೌಡ ಪಾಟೀಲ, ಬಮ್ಮಾಪುರ ಬ್ಲಾಕ್ ಅಧ್ಯಕ್ಷರಾದ ಮೆಹಮೂದ್ ಕೋಳೂರು, ವಾರ್ಡ್ ಅಧ್ಯಕ್ಷರಾದ ವಾದಿರಾಜ ಕುಲಕರ್ಣಿ, ಕುಮಾರ ಕುಂದನಹಳ್ಳಿ, ಯಲ್ಲಪ್ಪ ಮೆಹರವಾಡೆ, ಬಸವರಾಜ ಮೆಣಸಗಿ, ಶೋಭಾ ಕಮತರ, ಮೈನುದ್ದಿನ್ ಮುಚಾಲೆ, ಮುಖಂಡರಾದ ಪ್ರಕಾಶ ಬುರಬುರೆ,ಶ್ರೀನಿವಾಸ ಬೆಳದಡಿ, ಲತೀಫ್ ಸಾಬ್ ಶರಬತ್ತವಾಲೆ, ಅಜರ್ ಮರ್ಚಂಟ್, ಶಫೀ ಮುದ್ದೇಬಿಹಾಳ, ಮೌಲಾನಾ ಕುಮಟಾಕರ, ಬಾಗಣ್ಣ ಬಿರಾಜದಾರ, ನಾಸಿರ ಅಸುಂಡಿ, ರಾಕೇಶ ಪಲ್ಲಾಟೆ, ಶಾರುಖ್ ಮುಲ್ಲಾ, ತಾರಾದೇವಿ ವಾಲಿ, ರಾಜೇಶ್ವರಿ ಬಿಲಾನಾ, ಪುಷ್ಪಾಂಜಲಿ, ಹೊಂಗೆಮ್ಮ ಜಮಖಂಡಿ, ಅಕ್ಕಮ್ಮ ಕಂಬಳಿ, ಚೇತನಾ ಲಿಂಗದಾಳ, ಇತರರು ಇದ್ದರು.