ಶಾಸಕರಿಂದ ಪ್ರಾಣವಾಯುಗೆ ಫ್ಲೋಮೀಟರ್ ವಿತರಣೆ

ಹಗರಿಬೊಮ್ಮನಹಳ್ಳಿ.ಮೇ.೨೭ ಶಾಸಕರು ಕಳೆದ ಬಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಡಾಕ್ಟರ್ ಕೋರಿಕೆಯಂತೆ 20 ಪ್ರೋನೇಟರ್ ವಿತರಣೆ ಮಾಡುತ್ತಿದ್ದೇನೆ ಎಂದು ಶಾಸಕ ಭೀಮಾನಾಯ್ಕ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ ಈ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಇಡೀ ರಾಜ್ಯದಲ್ಲಿ 11 ನೇ ಸ್ಥಾನ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ಇರುವುದಕ್ಕೆ ಇಲ್ಲಿಯ ವೈದ್ಯರು ಮತ್ತು ಸಿಬ್ಬಂದಿ ವರ್ಗ ಸತತ ಶ್ರಮದಿಂದ ಒಂದು ಹಂತಕ್ಕೆ ಬರಲು ಸಾಧ್ಯ. ಕೊರನಾ ಎರಡನೇ ಅಲೆಯಿಂದಾಗಿ ಭಯದ ವಾತಾವರಣ ಆವರಿಸಿದೆ ತಮ್ಮ ಜೀವನದ ಹಂಗನ್ನು ತೊರೆದು ಸೋಂಕಿತರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ವೈದ್ಯರು ಹಗಲಿರುಳು ಶ್ರಮಪಡುತ್ತಿದ್ದಾರೆ ಇಂಥವರ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ತಾಲೂಕಿನಲ್ಲಿ 2898 ಹೆಚ್ಚು ತಪಾಸಣೆ ನಡೆಸಿದಾಗ 1928 ಕೇಸ್ ಪಾಸಿಟಿವ್ ಬಂದಿದ್ದು ಇದರಲ್ಲಿ 19 ಜನ ಸಾವನ್ನಪ್ಪಿದ್ದಾರೆ. ಎಂದರು.
ಈ ಸಂದರ್ಭದಲ್ಲಿ ತಾಹಶೀಲ್ದಾರ್ ಶರಣಮ್ಮ,ತಾಪಂ ಇಒ ಹಾಲಸಿದ್ದಪ್ಪ ಪೂಜೀರಿ, ತಾಲೂಕ ವೈದ್ಯಾಧಿಕಾರಿ ಡಾ.ಶಿವರಾಜ್, ಮುಖ್ಯ ವೈದ್ಯಾಧಿಕಾರಿ ಡಾ.ಶಂಕರ್ ನಾಯ್ಕ ಲೋಕೋಪಯೋಗಿ ಇಲಾಖೆ ಪ್ರಭಾಕರ್ ಶೆಟ್ಟಿ ಕ್ಷೇತ್ರಶಿಕ್ಷಣಾಧಿಕಾರಿ ಶೇಖರಪ್ಪ ಹೊರ ಪೇಟೆ, ತೋಟಗಾರಿಕೆ ಇಲಾಖೆಯ ಪರಮೇಶ್ವರಪ್ಪ ಮುಖಂಡರಾದ ವಿಜಯಕುಮಾರ್ ತೋಟೇಶ್ ಅಲ್ಲಾಭಕ್ಷಿ,ಮುಟುಗನಹಳ್ಳಿ ಕೊಟ್ರೇಶ, ಕನ್ನಳ್ಳಿ ಚಂದ್ರು, ಹನುಮಂತ ಪವಾಡಿ, ಇತರರು ಇದ್ದರು