ಶಾಸಕರಿಂದ ಪವರ್ ಟಿಲ್ಲರ್, ವೀಡರ್ ವಿತರಣೆ

ತಿ.ನರಸೀಪುರ: ಜ.10:- ಸರ್ಕಾರದ ಕೃಷಿ ಯಾಂತ್ರಿಕರಣ ಯೋಜನೆಯಡಿ ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲ್ಪಡುವ ಪವರ್ ಟಿಲ್ಲರ್ ಮತ್ತು ಪವರ್ ವೀಡರ್ ಗಳನ್ನು ಶಾಸಕ ಎಂ .ಅಶ್ವಿನ್ ಕುಮಾರ್ ವಿತರಿಸಿದರು.
ಪಟ್ಟಣದ ಕೃಷಿ ಇಲಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು 2022-23ನೇ ಸಾಲಿನ 7 ಪವರ್ ಟಿಲ್ಲರ್ ಮತ್ತು 1 ಪವರ್ ವೀಡರ್ ರನ್ನು ರೈತರಿಗೆ ವಿತರಿಸಿದರು.ಪರಿಶಿಷ್ಟ ಜಾತಿಗೆ 2,ಪರಿಶಿಷ್ಟ ಪಂಗಡಕ್ಕೆ 1 ಮತ್ತು ಸಾಮಾನ್ಯ ವರ್ಗಕ್ಕೆ 4 ಸೇರಿದಂತೆ ಒಟ್ಟು 7 ಪವರ್ ಟಿಲ್ಲರ್ ಮತ್ತು ಪರಿಶಿಷ್ಟ ಜಾತಿಗೆ 1 ಪವರ್ ವೀಡರ್ ಅನ್ನು ಶಾಸಕರು ವಿತರಿಸಿದರು.
ರೈತರ ಯಾಂತ್ರಿಕ ಸ್ವಾವಲಂಬನೆಯ ಉದ್ದೇಶಕ್ಕಾಗಿ ಸರ್ಕಾರ ಕೃಷಿ ಯಾಂತ್ರೀಕರಣ ಯೋಜನೆಯಡಿ ಪರಿಶಿಷ್ಟ ಜಾತಿ/ಪಂಗಡಕ್ಕೆ 1 ಲಕ್ಷ ಮತ್ತು ಸಾಮಾನ್ಯ ವರ್ಗಕ್ಕೆ 82500/-ರೂಗಳ ಸಹಾಯಧನದಲ್ಲಿ ಪವರ್ ಟಿಲ್ಲರ್ ಮತ್ತು 82500/-ರೂಗಳ ಸಹಾಯಧನದಲ್ಲಿ ಪವರ್ ವೀಡರ್ ನ್ನು ನೀಡಲಾಗುತ್ತಿದೆ.
ನಂತರ ಮಾತನಾಡಿದ ಶಾಸಕರು,ಸರ್ಕಾರ ರೈತರ ಆರ್ಥಿಕ ಕ್ಷಮತೆಯನ್ನು ವೃದ್ಧಿಸುವ ದೃಷ್ಟಿಯಿಂದ ಹಲವು ಯೋಜನೆಗಳಲ್ಲಿ ಸಹಾಯಧನ ನೀಡುತ್ತಿದೆ.ಹಾಗಾಗಿ ರೈತರು ಸರ್ಕಾರ ನೀಡುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.
ರೈತರು ಆಧುನಿಕ ಬೇಸಾಯ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು.ಇದರಿಂದ ಸುಲಭವಾಗಿ ಬೇಸಾಯ ಮಾಡುವುದಲ್ಲದೆ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿ .ಪಂ.ಸದಸ್ಯ ಜಯಪಾಲ್ ಭರಣಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾಸಿನಿ, ಕೃಷಿ ಅಧಿಕಾರಿಗಳಾದ ವಿಜಯಲಕ್ಷ್ಮಿ,ಶಿವರಾಜು, ವಿಶಾಲು ತಾಂತ್ರಿಕ ಅಧಿಕಾರಿ ರಾಘವೇಂದ್ರ , ಆತ್ಮ ಯೋಜನೆಯ ಶಿವಣ್ಣ ,ತಾಲೂಕು ಜೆಡಿಎಸ್ ಅಧ್ಯಕ್ಷ ಚಿನ್ನಸ್ವಾಮಿ, ಶಂಭುದೇವನಪುರ ರಮೇಶ್, ಮಾವಿನಹಳ್ಳಿ ರಾಜೇಶ್, ದ್ವಾರಕೀಶ್ ಹಾಗೂ ಇತರರು ಹಾಜರಿದ್ದರು .