ಶಾಸಕರಿಂದ ಪರಿಹಾರ ವಿತರಣೆ: ಎರಡು ಕುಟುಂಬಗಳಿಗೆ ತಲಾ 5 ಲಕ್ಷ ರೂ. ಚೆಕ್ ಹಸ್ತಾಂತರ

ಚಡಚಣ:ಜ.9: ತಾಲ್ಲೂಕಿನ ಹತ್ತಳ್ಳಿ ಗ್ರಾಮದ ಯುವಕ ರಮೇಶ ದುಂಡಪ್ಪ. ಬಸರಗಿ ಕಳೆದ ವರ್ಷ ಸಪ್ಟೆಂಬರ್ ನಲ್ಲಿ ಭೀಮಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ ಹಾಗೂ ಅದೇ ಗ್ರಾಮದ ರೈತ ಧರೇಪ್ಪ ಧರ್ಮಣ್ಣ. ಬಿರಾದಾರ ಅವರು ಕಳೆದ ವರ್ಷ ಅಕ್ಟೋಬರ್ ನಲ್ಲಿ ಸಿಡಿಲು ಬಡಿದು ಮೃತಪಟ್ಟ ಕುಟುಂಬದವರಿಗೆ ಭೇಟಿ ನೀಡಿ, ತಲಾ 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ ಚವಲರ, ಕಂದಾಯ ನಿರೀಕ್ಷಕ ಪಿ.ಜೆ ಕೊಡಹೊನ್ನ, ಪಿಎ??? ಸತಿಗೌಡರ, ಜಿ.ಪಂ ಸದಸ್ಯ ಭೀಮಾಶಂಕರ ಬಿರಾದಾರ, ತಾಲ್ಲೂಕಾಧ್ಯಕ್ಷ ಜೆಡಿಎಸ್ ಅಮಸಿದ್ಧ ಬಳಗಾನೂರ, ಜಿಲ್ಲಾ ರೈತ ಸಂಘದ ಅಧ್ಯಕ್ಷ ದಯಾನಂದ ಕಸಮೂಳೆ, ಮುಖಂಡರಾದ ಬಸುಸಾಹುಕಾರ ಬಿರಾದಾರ, ಪೀರಪ್ಪ ಅಗಸರ,
ಸಿದ್ದು ಲೋಣಿ, ಅರ್ಜುನ ಬಿರಾದಾರ, ಜಕರಾಯ ತಡವಲಕರ, ಗೇನಪ್ಪ ಬಿರಾದಾರ, ಗಿರೀಶ ಬಾಲಗಾವ, ಗುರುಲಿಂಗಪ್ಪ ಬಿರಾದಾರ ಮತ್ತಿತರರು ಇದ್ದರು.